ದಂಪತಿಯ ವಿಕೃತ ಕಾಮುಕತೆಗೆ ತಕ್ಕ ಶಿಕ್ಷೆ; ಸಂತ್ರಸ್ತ ಮಹಿಳೆ ಅಳುತ್ತ ಹೇಳಿದ್ದಳು ಈ ಜೋಡಿಯ ಕ್ರೌರ್ಯವನ್ನು...

Couple 19 may 20
Published on

ಲಂಡನ್: ದಂಪತಿಯ ವಿಕೃತ ಕಾಮುಕತೆಗೆ ತಕ್ಕ ಶಿಕ್ಷೆ ಆಗಿದೆ. 2017ರಲ್ಲಿ ಮಾಡಿದ್ದ ನೀಚ ಕೃತ್ಯಕ್ಕೆ ನ್ಯಾಯಾಲಯ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇಂಗ್ಲೆಂಡ್​​ನ ಬ್ರಾಡ್​ಫೋರ್ಡ್​ ಸಿಟಿಯ ಮೊಹಮ್ಮದ್ ಹುಸ್ಸೇನ್​ (22), ಯಾಜ್ಮಿನ್​ ಅಲಿ (31) ಶಿಕ್ಷೆಗೆ ಗುರಿಯಾದವರು.

2017ರ ಜುಲೈನಲ್ಲಿ ಈ ಇಬ್ಬರು ಪಬ್​ ಒಂದರಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದರು. ಅದೇ ಮಾರ್ಗದಲ್ಲಿ ಹೊರಟಿದ್ದ ಮಹಿಳೆಯೋರ್ವರನ್ನು ನೋಡಿ ಕೈ ಸನ್ನೆ ಮೂಲಕ ಕರೆದರು. ಕಾರಣ ಇವರಿಬ್ಬರ ಕಾಮದಾಟಕ್ಕೆ ಇನ್ನೋರ್ವರು ಬೇಕಿತ್ತು. ಮೂವರೂ ಕೂಡಿ ಸೆಕ್ಸ್​ ಮಾಡುವುದು ದಂಪತಿಯ ಉದ್ದೇಶವಾಗಿತ್ತು.

ಅಲಿ ಮತ್ತು ಹುಸ್ಸೇನ್​ ಆಗಲೇ ಕಂಠಪೂರ್ತಿ ಕುಡಿದು, ಕೊಕೇನ್​ ಸೇವನೆ ಮಾಡಿದ್ದರು. ಅದೇ ಸಮಯಕ್ಕೆ ಅಲ್ಲಿ ಕಾಣಿಸಿಕೊಂಡ ಮಹಿಳೆಯನ್ನು ಯಾಜ್ಮಿನ್​ ಅಲಿ ತಮ್ಮ ಫ್ಲ್ಯಾಟ್​ಗೆ ಬರುವಂತೆ ಆಮಂತ್ರಿಸಿದರು. ಮೊದಲು ಆಕೆ ಒಪ್ಪಲಿಲ್ಲ. ನಂತರ ಮಹಿಳೆಗೆ ಹೆಚ್ಚಿನ ವೋಡ್ಕಾ, ಕೊಕೇನ್​ ಕೊಡುವುದಾಗಿ ಈ ದಂಪತಿ ಆಮಿಷವೊಡ್ಡಿದರು. ಈಗಾಗಲೇ ರಾತ್ರಿಯಾಗಿದೆ, ಮನೆಗೆ ಬನ್ನಿ, ಮೂವರೂ ಕುಳಿತು ಕುಡಿಯೋಣ ಎಂದು ಅಲಿ ಹೇಳಿದಳು.

ಅದನ್ನು ನಂಬಿ ಮನೆಗೆ ಬಂದ ಮಹಿಳೆಗೆ ಬಹುದೊಡ್ಡ ಶಾಕ್​ ಕಾದಿತ್ತು. ವೋಡ್ಕಾ ಕೊಡುವುದಾಗಿ ಹೇಳಿ ಕರೆದುಕೊಂಡು ಬಂದ ದಂಪತಿ, ಮನೆಗೆ ಬರುತ್ತಿದ್ದಂತೆ ತಮ್ಮೊಂದಿಗೆ ಸೆಕ್ಸ್ ಮಾಡುವಂತೆ ಅವಳಿಗೆ ಒತ್ತಾಯಿಸಿದರು. ಆಕೆಯ ಎದುರೇ ಸಂಭೋಗಕ್ಕೆ ಶುರುಮಾಡಿದರು. ಮಹಿಳೆ ಪ್ರತಿರೋಧ ಒಡ್ಡಿದಾಗ ಅಲಿ ಅವಳ ಕುತ್ತಿಗೆಗೆ ಚಾಕು ಹಿಡಿದು, ಹಿಂಸೆ ಮಾಡತೊಡಗಿದಳು. ನಂತರ ಇಬ್ಬರೂ ಸೇರಿ ಮಹಿಳೆಯ ಬಟ್ಟೆಗಳನ್ನೆಲ್ಲ ಬಲವಂತವಾಗಿ ಬಿಚ್ಚಿಸಿ ರೇಪ್​ ಮಾಡಿದ್ದರು.

ಅದು ಹೇಗೋ ತಪ್ಪಿಸಿಕೊಂಡ ಮಹಿಳೆ, ಸಿಕ್ಕಷ್ಟು ಬಟ್ಟೆಯನ್ನು ಹಾಕಿಕೊಂಡು, ಬೂಟುಗಳನ್ನು ಎತ್ತಿಕೊಂಡು ಫ್ಲ್ಯಾಟ್​ನಿಂದ ಅಳುತ್ತ ಓಡಿಹೋಗಿದ್ದರು. ದಾರಿ ಮಧ್ಯ ಸಿಕ್ಕ ಓರ್ವರ ಸಹಾಯದಿಂದ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಪ್ರಕರಣ ದಾಖಲಾಗಿತ್ತು. ಸಂತ್ರಸ್ತ ಮಹಿಳೆ ಪೊಲೀಸರ ಎದುರು ಅಳುತ್ತ ಘಟನೆಯನ್ನು ವಿವರಿಸಿದ್ದರು. ದಂಪತಿ ತನ್ನ ಮೇಲೆ ನಡೆಸಿದ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು.

ವಿಚಾರಣೆ ನಡೆಸಿದ್ದ ಪಟ್ಟಣದ ನ್ಯಾಯಾಲಯ ಜನವರಿಯಲ್ಲಿಯೇ ಅಲಿ ಮತ್ತು ಹುಸ್ಸೇನ್​ ಅಪರಾಧಿಗಳು ಎಂದು ತೀರ್ಪು ನೀಡಿ, ಶಿಕ್ಷೆ ಕಾಯ್ದಿರಿಸಿತ್ತು. ಇದೀಗ 25 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net