More

    ಸುದ್ದಿವಾಹಿನಿಯೊಂದರ 25ಕ್ಕೂ ಹೆಚ್ಚು ಮಂದಿಗೆ ಕರೊನಾ ಪಾಸಿಟಿವ್​; ಕಚೇರಿ ಸೀಲ್​ ಡೌನ್​

    ಕರೊನಾ ವೈರಸ್ ಸೋಂಕು ಹರಡುವ ಪ್ರಮಾಣದ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದೀಗ ಸುದ್ದಿವಾಹಿನಿಯೊಂದರ 28 ಉದ್ಯೋಗಿಗಳು ಕರೊನಾಕ್ಕೆ ತುತ್ತಾಗಿದ್ದು, ಸದ್ಯ ಆ ಕಚೇರಿ ಸಂಪೂರ್ಣ ಸೀಲ್​ಡೌನ್​ ಆಗಿದೆ.

    ಇನ್ನೂ ಒಂದು ಆತಂಕದ ವಿಚಾರವೇನೆಂದರೆ ಈ 28 ಜನರಿಗೆ ಕರೊನಾ ಸೋಂಕಿನ ಯಾವುದೇ ಲಕ್ಷಣಗಳೂ ಇರಲಿಲ್ಲ. ಕಡ್ಡಾಯ ತಪಾಸಣೆಯಡಿ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ.

    ಇದನ್ನೂ ಓದಿ: ‘ಅಯ್ಯಯ್ಯೋ ಹೆಂಗರ ಮಾಡಿ ಹೊರಗ ತಗೀರಿ..’

    ರಾಷ್ಟ್ರರಾಜಧಾನಿ ದೆಹಲಿಯಲ್ಲಿರುವ ಜೀ ನ್ಯೂಸ್​ ಕಚೇರಿಯಲ್ಲಿ 28 ಜನರಲ್ಲಿ ಕರೊನಾ ಸೋಂಕು ಇರುವುದಾಗಿ ವಾಹಿನಿಯ ಪ್ರಧಾನ ಸಂಪಾದಕ ಸುಧೀರ್​ ಚೌಧರಿ ತಿಳಿಸಿದ್ದಾರೆ.

    ಮೇ 15ರಂದು ಜೀ ನ್ಯೂಸ್​​ನ ಓರ್ವ ನೌಕರನಲ್ಲಿ ಕರೊನಾ ಪಾಸಿಟಿವ್​ ಆಗಿತ್ತು. ಆತನ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಹೋದ ಸಂಸ್ಥೆಯ ಎಲ್ಲ ಉದ್ಯೋಗಿಗಳನ್ನೂ ತಪಾಸಣೆಗೆ ಒಳಪಡಿಸಲಾಗಿತ್ತು. ಅವರಲ್ಲಿ 27 ಜನರಲ್ಲಿ ಕರೊನಾ ದೃಢಪಟ್ಟಿದೆ. ಇದೀಗ ಸೋಂಕಿತರ ಸಂಖ್ಯೆ 28ಕ್ಕೆ ಏರಿದೆ.

    ಈ ಬಗ್ಗೆ ಪ್ರಧಾನ ಸಂಪಾದಕ ಸುಧೀರ್​ ಚೌಧರಿ ಟ್ವೀಟ್ ಮಾಡಿದ್ದು, ನಮ್ಮ 28 ಸಹೋದ್ಯೋಗಿಗಳಲ್ಲಿ ಕರೊನಾ ದೃಢಪಟ್ಟಿದೆ. ಇದು ಸಂಕಷ್ಟದ ಸಮಯ. ಅವರಿಗೆ ಕರೊನಾ ಲಕ್ಷಣಗಳೇ ಇಲ್ಲ. ಅವರ ಆರೋಗ್ಯ ಸದ್ಯ ಚೆನ್ನಾಗಿದೆ. ಗಂಭೀರ ಸ್ಥಿತಿಯಲ್ಲಿ ಇಲ್ಲ. ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಅವರ ಧೈರ್ಯ ಹಾಗೂ ವೃತ್ತಿಪರತೆಗೆ ಒಂದು ಸಲಾಂ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಸಹೋದರನ ಶವಸಂಸ್ಕಾರಕ್ಕೆ ತೆರಳಲು ನಿಲ್ದಾಣಕ್ಕೆ ಆಗಮಿಸಿ ಬಸ್​ ಇಲ್ಲದೇ ಕಣ್ಣೀರಾಕುತ್ತಾ ಹಿಂದಿರುಗಿದ ಮಹಿಳೆ

    ಈ ಮಧ್ಯೆ ಕೆಲವರು ಇನ್ನೊಂದು ಆರೋಪ ಮಾಡುತ್ತಿದ್ದಾರೆ. ಜೀ ವಾಹಿನಿಯಲ್ಲಿ ಕರೊನಾ ದೃಢಪಟ್ಟವರ ಬಳಿ ಇನ್ನೂ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಅವರೆಲ್ಲ ಇನ್ನೂ ಕಚೇರಿಗೆ ಬರುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾದ ಸುದ್ದಿ ಹರಡುತ್ತಿದ್ದಾರೆ. ಆದರೆ ನಾನು ಸ್ಪಷ್ಟಪಡಿಸುತ್ತೇನೆ. ಎಲ್ಲ ಕರೊನಾ ಸೋಂಕಿತರನ್ನೂ ಕ್ವಾರಂಟೈನ್​ ಮಾಡಲಾಗಿದೆ. ಅವರು ಯಾರೂ ಕಚೇರಿಗೆ ಬರುತ್ತಿಲ್ಲ. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಟ್ರೇಸ್​ ಮಾಡುವ ಕೆಲಸವೂ ನಡೆಯುತ್ತಿದೆ. ಕಚೇರಿ ಸ್ಯಾನಿಟೈಸ್​ ಮಾಡಲಾಗುತ್ತಿದೆ ಎಂದು ಸುಧೀರ್​ ಚೌಧರಿ ಹೇಳಿದ್ದಾರೆ.

    2500 ಉದ್ಯೋಗಿಗಳು ಇರುವ ಜೀ ವಾಹಿನಿಯಲ್ಲಿ ಈಗ ಎಲ್ಲರ ಕರೊನಾ ಟೆಸ್ಟ್​ ಮಾಡಿಸುವ ಪ್ರಕ್ರಿಯೆ ನಡೆಯುತ್ತಿದೆ. ನಮಗೆ ನಮ್ಮ ಪ್ರತಿ ಉದ್ಯೋಗಿಯ ಸುರಕ್ಷತೆ ಮುಖ್ಯ ಎಂದು ಸಂಸ್ಥೆ ತಿಳಿಸಿದೆ. (ಏಜೆನ್ಸೀಸ್)

    ಇದನ್ನೂ ಓದಿ: ಕ್ವಾರಂಟೈನ್​ನಲ್ಲಿ ಸೂಕ್ತ ಸೌಲಭ್ಯ ಒದಗಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts