ಆರ್​ಬಿಐನಲ್ಲಿ ನಕಲಿ ನೋಟು ಪತ್ತೆ, ಎಫ್​​ಐಆರ್​ ದಾಖಲು

rbi
Published on

ಬೆಂಗಳೂರು: ನಕಲಿ ನೋಟು ಚಲಾವಣೆ ದಂಧೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಇದೀಗ ಬ್ಯಾಂಕ್​ಗಳ ಕರೆನ್ಸಿ ಚೆಸ್ಟ್​ ಜಮೆ ಮಾಡಿದ ಹಣದಲ್ಲಿ 100 ರೂ. ಮತ್ತು 50 ರೂ. ಮುಖ ಬೆಲೆಯ ನಕಲಿ ನೋಟುಗಳು ಆರ್​ಬಿಐನಲ್ಲಿ ಪತ್ತೆಯಾಗಿವೆ.

ನೃಪತುಂಗ ರಸ್ತೆಯಲ್ಲಿನ ಭಾರತೀಯ ರಿಸರ್ವ್​ ಬ್ಯಾಂಕ್​ ಪ್ರಾದೇಶಿಕ ಕಚೇರಿ ಅಧಿಕಾರಿ, ನಕಲಿ ನೋಟು ಕುರಿತು ಹಲಸೂರು ಗೇಟ್​ ಠಾಣೆಗೆ ದೂರು ನೀಡಿದ್ದಾರೆ.

ಶಿವಮೊಗ್ಗದ ಕೆನರಾ ಬ್ಯಾಂಕ್​ನ ಕರೆನ್ಸಿ ಚೆಸ್ಟ್​ ಮತ್ತು ಇತರ ಕರೆನ್ಸಿ ಚೆಸ್ಟ್​ ವ್ಯವಸ್ಥಾಪಕರು ಮೇ 1ರಿಂದ ಜೂನ್​ 30ರ ವರೆಗೆ ಆರ್​ಬಿಐಗೆ ಹಳೆಯ ನೋಟುಗಳನ್ನು ಜಮೆ ಮಾಡಿದರು. ಈ ವೇಳೆ 100 ರೂ. ಮುಖಬೆಲೆಯ 15 ನೋಟು ಮತ್ತು 50 ರೂಪಾಯಿ ಮುಖಬೆಲೆಯ 15 ನಕಲಿ ನೋಟು ಪತ್ತೆಯಾಗಿವೆ.

ನಕಲಿ ನೋಟು ಚಲಾವಣೆ ಮಾಡಿದ ಆರೋಪಿಗಳನ್ನು ಪತ್ತೆ ಮಾಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net