ಕರೊನಾ ಭೀತಿ: ಸೀನಿದಾತನಿಗೆ ಬಿತ್ತು ಗೂಸಾ!

Coronavirus
Published on

ಕೊಲ್ಲಾಪುರ: ಮಾರಕ ಕರೊನಾ ವೈರಸ್​ ಎಲ್ಲರನ್ನೂ ಹೇಗೆ ಭಯಭೀತಿಗೊಳಿಸಿದೆ ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ. ಬೈಕ್​ ಸವಾರನೊಬ್ಬ ಸಾರ್ವಜನಿಕ ಪ್ರದೇಶದಲ್ಲಿ ಸೀನಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿನ ಗುರುವಾರ ನಡೆದಿದೆ.

ಘಟನೆಗೆ ಸಂಬಂಧಿಸಿದ ಸಿಸಿಟಿವಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.​

ವಿಡಿಯೋದಲ್ಲಿ ಏನಿದೆ?: ಬೈಕ್​ ಸವಾರರು ಮತ್ತೊಬ್ಬ ಬೈಕ್​ ಸವಾರ ಜತೆ ರಸ್ತೆ ಪಕ್ಕದಲ್ಲಿ ಚರ್ಚೆ ನಡೆಸುವುದನ್ನು ಕಾಣಬಹುದಾಗಿದೆ. ಯಾವುದೇ ಕರವಸ್ತ್ರವನ್ನು ಬಳಸದೇ ಸೀನುವುದರಿಂದ ಕರೊನಾ ವೈರಸ್​ ಹರಡುವ ಸಾಧ್ಯತೆ ಇದೆ ಎಂಬ ವಾಗ್ವಾದ ನಡೆಯುವಾಗ, ಅದು ತಾರಕಕ್ಕೇರಿ ಸೀನಿದ ವ್ಯಕ್ತಿಯ ಮೇಲೆ ಇತರರು ಹಲ್ಲೆ ನಡೆಸಿದ್ದಾರೆ.

ಈ ಘಟನೆಯಿಂದ ಟ್ರಾಫಿಕ್​ ಜಾಮ್​ ಕಿರಿಕಿರಿಯು ಸಂಚಾರರಿಗೆ ಅನುಭವವಾಗಿದೆ. ಆದರೆ, ಘಟನೆ ಕುರಿತು ಯಾವೊಬ್ಬರು ಬಂದು ದೂರು ದಾಖಲಿಸಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಈವರೆಗೂ 49 ಕರೊನಾ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಓರ್ವ ಮೃತಪಟ್ಟಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕರೊನಾ ವೈರಸ್​ ಸೋಂಕಿತ ವ್ಯಕ್ತಿಯ ಉಗುಳುವಿಕೆ, ಸೀನುವಿಕೆ, ಕೆಮ್ಮುವಿಕೆ ಅಥವಾ ದೈಹಿಕ ಸಂಪರ್ಕದಿಂದ ಹರಡುತ್ತದೆ ಎಂದು ಎಚ್ಚರಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net