ಗಾಳಿಯಿಂದಲೂ ಹರಡುತ್ತೆ ಕರೊನಾ ಸೋಂಕು; ತಡೆಯುವುದಕ್ಕೆ ಇಲ್ಲಿವೆ ಉಪಾಯಗಳು

Corona- airborne- prevention
Published on

ನವದೆಹಲಿ: ಕರೊನಾ ಸೋಂಕು ಗಾಳಿ ಹಾಗೂ ಗಾಳಿಯ ಕಣಗಳ ಮೂಲಕವೂ ಹರಡುತ್ತದೆ ಎಂಬುದನ್ನು ವಿಶ್ವ ಸಂಸ್ಥೆಯೇ ಒಪ್ಪಿಕೊಂಡಿದೆ. ಹೀಗಾಗಿ ಸೋಂಕು ಹಬ್ಬದಂತೆ ದೂರವಿರಲು ಹೆಚ್ಚು ಹೆಚ್ಚು ಜಾಗರೂಕತೆ ವಹಿಸಬೇಕಾಗಿದೆ.

ಇದರಿಂದ ಪಾರಾಗುವುದು ಹೇಗೆ ಎನ್ನಲು ತಜ್ಞ ವೈದ್ಯರು ನೀಡಿರುವ ಸಲಹೆಗಳು ಇಲ್ಲಿವೆ.

  • ಹೆಚ್ಚು ಜನರಿರುವ ಪ್ರದೇಶಗಳಿಗೆ ತೆರಳುವುದನ್ನು ತಡೆಗಟ್ಟಿ. ಇದರಿಂದ ಸೋಂಕು ಸುಲಭವಾಗಿ ಹರಡುತ್ತೆ.
  • ನುಮ್ಮ ಮುಖದೆದುರು ಯಾವುದಾದರೊಂದು ತಡೆ ಇರಬೇಕು. ಇದು ಗಾಳಿಯಲ್ಲಿರುವ ಕಣಗಳು ನಿಮ್ಮ ದೇಹ ಪ್ರವೇಶಿಸುವುದನ್ನು ತಡೆಯುತ್ತದೆ. ಜತೆಗೆ, ದೇಹದ ಒಳಗಿರುವ ಪ್ರತಿರೋಧ ಶಕ್ತಿ ಕ್ಷಿಪ್ರವಾಗಿ ಕುಂದುವುದನ್ನು ತಡೆಗಟ್ಟುತ್ತದೆ.
  • ವೈಯಕ್ತಿಕ ಮಟ್ಟದಲ್ಲಿ ಜನರು ಫೇಸ್​ ಮಾಸ್ಕ್​, ಫೇಸ್​ ಶೀಲ್ಡ್​ ಧರಿಸುವುದು ಉತ್ತಮ. ಜತೆಗೆ ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳಬೇಕು.
  • ನಾವಿರುವ ಕೊಠಡಿ ಹಾಗೂ ವಾಸಸ್ಥಳಗಳು ಚೆನ್ನಾಗಿ ಗಾಳಿಯಾಡುತ್ತಿರಬೇಕು. ಇದು ಗಾಳಿಯನ್ನು ಶುಭ್ರವಾಗಿಡುತ್ತದೆ.
  • ಕೆಮ್ಮುವಾಗ ಹಾಗು ಸೀನುವಾಗ ಬಟ್ಟೆ ಅಥವಾ ಮಣಿಕಟ್ಟನ್ನು ಅಡ್ಡವಾಗಿಟ್ಟುಕೊಳ್ಳಬೇಕು.
  • ಅನಗತ್ಯವಾಗಿ ಕಣ್ಣು, ಮೂಗು, ಬಾಯಿ ಸ್ಪರ್ಶಿಸುವುದು ಒಳ್ಳೆಯದಲ್ಲ. ಅದರಲ್ಲೂ ಕೈಗಳನ್ನು ತೊಳೆದುಕೊಳ್ಳದೇ ಇಂಥದ್ದನ್ನು ಮಾಡಲೇಬಾರದು.
  • ಆಗಾಗ ಕೈಗಳನ್ನು ಸ್ವಚ್ಛವಾಗಿ ಕನಿಷ್ಠ 20 ಸೆಕೆಂಡ್​ವರೆಗೆ ತೊಳೆದುಕೊಳ್ಳಬೇಕು.

ಇಷ್ಟಕ್ಕೂ ಗಾಳಿಯಿಂದ ಕರೊನಾ ಮಾತ್ರವಲ್ಲ, ಹಲವು ಕಾಯಿಲೆಗಳು ಹರಡುತ್ತವೆ. ಸಾಮಾನ್ಯ ಶೀತ, ಶೀತಜ್ವರ, ದಡಾರ, ಕ್ಷಯ ರೋಗ ಹಾಗೂ ಸಿಡುಬು ಹಾಗೂ ಕೆಲ ಶ್ವಾಸಕೋಶದ ಕಾಯಿಲೆಗಳು ಗಾಳಿಯಿಂದಲೇ ಹರಡುತ್ತವೆ. ಈ ಎಲ್ಲ ಕಾಯಿಲೆಗಳಿಗೆ ಕೆಮ್ಮು, ಶೀತ, ಗಂಟಲು ಕರೆತ, ಚಳಿ ಸ್ನಾಯುಸೆಳೆತ ಮೊದಲಾದವುಗಳು ಸಾಮಾನ್ಯ ಲಕ್ಷಣಗಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net