

ಮೈತುಂಬ ಪರ್ಸನಲ್ ಪ್ರೊಟೆಕ್ಷನ್ ಕಿಟ್ (ಪಿಪಿಇ) ಧರಿಸಿ, ಕೈಗಳಿಗೆ ಗ್ಲೌಸ್ ಧರಿಸಿ ದಿನಕ್ಕೆ ಕನಿಷ್ಠ 10 ತಾಸು ಕೆಲಸ ಮಾಡುವ ವೈದ್ಯರ ಸ್ಥಿತಿ ಹೇಗಿರುತ್ತದೆ ಎಂಬುದು ಊಹಿಸಲಸಾಧ್ಯ. ಗ್ಲೌಸ್ ತೆಗೆದಾಗ ಅವರ ಕೈ ಯಾವ ಸ್ವರೂಪಕ್ಕೆ ತಿರುಗಿರುತ್ತದೆ ಎಂಬುದನ್ನು ತೋರಿಸಲು ವೈದ್ಯರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ಕರೊನಾ ವಾರಿಯರ್‌ಗಳ ಕೆಲಸ ನಾವಂದುಕೊಂಡಷ್ಟು ಸುಲಭವಲ್ಲ. ಇಂಥ ಕಠಿಣ ಕೆಲಸದ ಮೂಲಕ ಜನರನ್ನು ರಕ್ಷಿಸುತ್ತಿರುವ ಕರೊನಾ ಸೇನಾನಿಗಳ ಬಗ್ಗೆ ನಿಮ್ಮದೊಂದು ಮೆಚ್ಚುಗೆ ಇರಲಿ.