More

    ಕರೊನಾ ನಿಯಂತ್ರಣ: ಕೇಂದ್ರದ ಶ್ಲಾಘನೆಗೆ ಬಿಎಸ್‌ವೈ ಸಂತಸ

    ಬೆಂಗಳೂರು: ಕರೊನಾ ಸೋಂಕು ನಿಯಂತ್ರಿಸುವಲ್ಲಿ ಕರ್ನಾಟಕ ಸರ್ಕಾರ ಕೈಗೊಂಡ ಕ್ರಮಗಳನ್ನು ಕೇಂದ್ರ ಸರ್ಕಾರ ಮುಕ್ತ ಕಂಠದಿಂದ ಶ್ಲಾಘಿಸಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ‘‘ಕೋವಿಡ್ ನಿರ್ವಹಣೆಯಲ್ಲಿ ಕರ್ನಾಟಕ ಮಾದರಿಯನ್ನು ಅನುಸರಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಹೇಳಿದೆ. ಇದಕ್ಕಾಗಿ ಟೀಮ್ ಕರ್ನಾಟಕ ಮತ್ತು ನಮ್ಮ ಎಲ್ಲ ಕರೊನಾ ಯೋಧರಿಗೆ ಅಭಿನಂದನೆಗಳು’’ ಎಂದಿದ್ದಾರೆ.

    ಇದನ್ನೂ ಓದಿ: ಸಿದ್ಧಗಂಗಾ ಮಠದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕರೊನಾ: ಇತರ 400 ವಿದ್ಯಾರ್ಥಿಗಳಿಗೆ ಆತಂಕ!

    ‘‘ನಮ್ಮ ಈ ಅನುಕರಣೀಯ ಮಾದರಿಯ ಹಿಂದೆ ದಕ್ಷ, ಪ್ರಾಮಾಣಿಕ ಆಡಳಿತ, ಪರಿಣಾಮಕಾರಿ ನೀತಿಗಳು ಮತ್ತು ತಂತ್ರಜ್ಞಾನದ ಸದ್ಬಳಕೆ, ನಿಖರ ಅನುಷ್ಠಾನದ ಸಾಂಘಿಕ ಪ್ರಯತ್ನಗಳಿವೆ’’ ಎಂದು ಯಡಿಯೂರಪ್ಪ ಹೇಳಿದ್ದಾರೆ.

    ಇದಕ್ಕೆ ಮುನ್ನ ಕೇಂದ್ರ ಆರೋಗ್ಯ ಸಚಿವಾಲಯ, ‘‘ಕರೊನಾ ಹಾವಳಿಯನ್ನು ನಿಯಂತ್ರಿಸಲು ಕರ್ನಾಟಕ ಕೈಗೊಂಡ ಮಾದರಿಯಾಗಿವೆ. ಅದನ್ನು ಇತರ ರಾಜ್ಯಗಳೂ ಅನುಕರಿಸಬೇಕು’’ ಎಂದು ಮುಕ್ತ ಕಂಠದಿಂದ ಪ್ರಶಂಸಿಸಿತ್ತು.

    ಕರೊನಾ ನಿಯಂತ್ರಣದಲ್ಲಿ ಕರ್ನಾಟಕವೇ ಮಾದರಿ: ಕೇಂದ್ರದ ಶ್ಲಾಘನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts