More

    ಶಾಲೆಗಳನ್ನು ಪುನರಾರಂಭಿಸಲು ಒತ್ತಾಯ

    ನಿಡಗುಂದಿ: ರಾಜ್ಯದಲ್ಲಿ ಕರೊನಾ ನಿಯಂತ್ರಣಕ್ಕೆ ಬಂದಿದ್ದು, ಕೂಡಲೇ ರಾಜ್ಯ ಸರ್ಕಾರ ಶಾಲೆಗಳನ್ನು ಪುನರಾರಂಭಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಎಲ್ಲ ಶಾಲೆಗಳ ಎದುರು ಮಕ್ಕಳ ಸಮೇತ ಪ್ರತಿಭಟನೆಗಿಳಿಯುವುದು ಅನಿವಾರ್ಯವೆಂದು ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ವೇದಿಕೆ ಬೆಳಗಾವಿ ವಿಭಾಗದ ಸಂಚಾಲಕ ಡಿ.ಬಿ.ಕುಪ್ಪಸ್ತ ಎಚ್ಚರಿಸಿದರು.

    ಕೋವಿಡ್‌ನಿಂದ ಬಂದ್ ಆಗಿರುವ ಶಾಲೆಗಳನ್ನು ಪುನರಾರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ವೇದಿಕೆ ನೇತೃತ್ವದಲ್ಲಿ ನಿಡಗುಂದಿ ತಹಸೀಲ್ದಾರ್ ಶಿವಲಿಂಗಪ್ರಭು ವಾಲಿ ಮೂಲಕ ಸೋಮವಾರ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

    ಬೇನಾಳ-ಆರ್‌ಎಸ್ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಜಿ.ಸಿ.ಮುತ್ತಲದಿನ್ನಿ, ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ ಮಾತನಾಡಿ, ಶಾಲೆಗಳನ್ನು ಬಂದ್ ಮಾಡಿದ ಪರಿಣಾಮ ಮಕ್ಕಳು ಬಾಲಕಾರ್ಮಿಕ, ಬಾಲ್ಯವಿವಾಹದಂತಹ ಬಾಲಾಪರಾಧಗಳಿಗೆ ಬಲಿಯಾಗುತ್ತಿದ್ದು, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಮಕ್ಕಳ ವಿದ್ಯಾರ್ಜನೆಗೆ ಸಹಕರಿಸಬೇಕೆಂದು ಒತ್ತಾಯಿಸಿದರು.

    ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಶಿವಲಿಂಗಪ್ರಭು ವಾಲಿ, ಶಾಲೆ ಬಂದ್ ಆಗಿದ್ದ ಪರಿಣಾಮ ವಿದ್ಯಾರ್ಥಿಗಳ ಕಲಿಕೆಯಲ್ಲಿ ಆಗುತ್ತಿರುವ ಹಿನ್ನಡೆಯಿಂದಾಗಿ ಎದುರಿಸುತ್ತಿರುವ ಸವಾಲುಗಳನ್ನು ನಮ್ಮ ಗಮನಕ್ಕೆ ತಾವು ತಂದಿದ್ದಿರಿ. ಶಾಲೆಗಳ ಪುನರಾರಂಭಿಸುವ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

    ತಾಪಂ ಸದಸ್ಯರಾದ ಅಮೃತ ಯಾದವ, ಗಂಗಾಧರ ಲಮಾಣಿ, ತಾಲೂಕಿನ ವಿವಿಧ ಶಾಲೆಗಳ ಎಸ್‌ಡಿಎಂಸಿ ಅಧ್ಯಕ್ಷ, ಪಾಲಕರಾದ ಬಸವರಾಜ ಹೆರಕಲ್ಲ, ಸತೀಶ ನರಸರೆಡ್ಡಿ, ಗೋಪಾಲ ದಳವಾಯಿ, ಚನ್ನಮಲ್ಲ ಉಳ್ಳಿ, ಚನ್ನಸಂಗಪ್ಪಗೌಡ ಪಾಟೀಲ, ಸಂಗಪ್ಪ ಗುಡ್ಡದ, ಯಲಗೂರದಪ್ಪ ಟುಬಾಕಿ, ಶಂಕರ ಜಲ್ಲಿ, ಶೇಖರ ಬಳ್ಳಾರಿ, ಪರಶುರಾಮ ಮಾದರ, ರಾಜು ಹತ್ತರಕಿಹಾಳ, ಹನುಮಂತ ಮಾದರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts