More

    ರೈತರಿಗೆ ತೊಂದರೆ ನೀಡಿದ್ರೆ ಉಗ್ರ ಹೋರಾಟ

    ಶೃಂಗೇರಿ: ಸರ್ಕಾರದ ಆದೇಶ ಬರುವ ತನಕ ರೈತರ ಒಕ್ಕಲೆಬ್ಬಿಸುವ ಕೆಲಸ ಮಾಡಬಾರದು ಎಂದು ಆಗ್ರಹಿಸಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಪದಾಧಿಕಾರಿಗಳು ಸೋಮವಾರ ವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜಾ ಅವರಿಗೆ ಮನವಿ ಸಲ್ಲಿಸಿದರು.
    ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಮಾತನಾಡಿ, ಅರಣ್ಯ ಇಲಾಖೆ ಸಣ್ಣ ಹಿಡುವಳಿದಾರರು ಹಾಗೂ ಜನಸಾಮಾನ್ಯರ ಅಕ್ರಮ-ಸಕ್ರಮದ ಅರ್ಜಿಗಳ ವಿಲೇವಾರಿ ಆಗುವ ತನಕ ಯಾವುದೇ ಹಸ್ತಕ್ಷೇಪ ನಡೆಸಬಾರದು. 2005ರಲ್ಲಿ ಸರ್ಕಾರಿ ಆದೇಶ ಹೊರಡಿಸಿದ್ದು ಮೀಸಲು ಅರಣ್ಯ ಎಂದು ಘೋಷಿಸಲಾದ ಸುಮಾರು 55 ಸಾವಿರ ಹೆಕ್ಟೇರ್‌ನ ಒಟ್ಟು ಪ್ರದೇಶದಲ್ಲಿ ಹತ್ತು ಸಾವಿರ ಹೆಕ್ಟೇರ್ ವ್ಯಾಪ್ತಿಯನ್ನು ಹೊರತುಪಡಿಸಿ ಪರಿಷ್ಕೃತ ಆದೇಶಗಳನ್ನು ಹೊರಡಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿತ್ತು. ಜಿಲ್ಲಾಧಿಕಾರಿ ಮೀನಾ ನಾಗರಾಜ್ ಈ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುತ್ತೇವೆ ಎಂದು ತಿಳಿಸಿದ್ದಾರೆ ಎಂದರು. ಸಮಿತಿಯ ಉಪಾಧ್ಯಕ್ಷರಾದ ನಾಗೇಶ್ ಮಾರನಕೊಡಿಗೆ, ಕೆಸಗೋಡು ಸುಬ್ರಾವ್, ಸಂಚಾಲಕರಾದ ಕಚ್ಚೋಡಿ ಶ್ರೀನಿವಾಸ್, ತನಿಕೋಡು ಮಂಜುನಾಥ್ ನಾಯ್ಕ, ಕಾರ್ಯದರ್ಶಿ ಕೆ.ಎಸ್.ರಮೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಭರತ್ ಗಿಣಕಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts