More

    ನೇಹಾ ಕೊಲೆಗಾರನನ್ನು ಗಡಿಪಾರು ಮಾಡಿ

    ನರಗುಂದ: ನೇಹಾ ಕೊಲೆ ಪ್ರಕರಣ ಇದೊಂದು ಹೇಯ ಕೃತ್ಯ. ಇಂತಹವರನ್ನು ಕಾನೂನು ವ್ಯವಸ್ಥೆ ಕೇವಲ ಬಂಧಿಸಿ ಜೈಲಿಗೆ ಹಾಕದೆ, ಅವರನ್ನು ತಕ್ಷಣ ಗಡಿಪಾರು ಮಾಡಬೇಕು ಎಂದು ಪಟ್ಟಣದ ವಿವಿಧ ಹೋರಾಟಪರ ಸಂಘಟನೆ ಸದಸ್ಯರು ತಹಸೀಲ್ದಾರ ಅನುಪಸ್ಥಿತಿಯಲ್ಲಿ ಕಚೇರಿ ಸಿಬ್ಬಂದಿ ಜೆ.ಪಿ. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
    ಹೋರಾಟ ಪರ ಸಂಘಟನೆ ಸದಸ್ಯ ರಾಘವೇಂದ್ರ ಗುಜಮಾಗಡಿ ಮಾತನಾಡಿ, ಈಚೆಗೆ ಅನೇಕ ಕೊಲೆ, ಬೆದರಿಕೆಗಳಿಂದ ಜಗತ್ತು ಭಯಾನಕವಾಗಿ ರೂಪಗೊಂಡಿದೆ. ಕಾನೂನು ಸುವ್ಯವಸ್ಥೆ ಸರಿಯಾಗಿರಬೇಕು. ಈ ಪ್ರಕರಣ ದೊಡ್ಡ ದುರಂತವಾಗಿದ್ದು, ಇದರಲ್ಲಿ ಭಾಗಿಯಾದ ಕ್ರೂರಿಯನ್ನು ತಕ್ಷಣ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
    ಸದಸ್ಯ ಚನ್ನು ನಂದಿ ಮಾತನಾಡಿ, ಒಂದೇ ಕಾಲದಲ್ಲಿ ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಮತ್ತು ಗದುಗಿನಲ್ಲಿ ಬಾಕಳೆ ಕುಟುಂಬಸ್ಥರ ನಾಲ್ಕು ಕೊಲೆಗಳು ನಡೆದಿವೆ. ಇದೊಂದು ಅಮಾನವೀಯ ಘಟನೆ. ಇಂತಹ ಕೊಲೆಗಡುಕರನ್ನು ತಕ್ಷಣ ಗಡಿಪಾರು ಮಾಡಬೇಕು ಎಂದರು.
    ಮಂಜುನಾಥ ದೊಡಮನಿ. ದತ್ತು ಜೋಗಣ್ಣವರ, ವಿಜಯ ಕೋತಿನ, ಶಿವಶಂಕರಯ್ಯ ಹಿರೇಮಠ, ಕರವೇ ತಾಲೂಕು ಘಟಕದ ಅಧ್ಯಕ್ಷ ನಬಿಸಾಬ ಕಿಲ್ಲೇದಾರ, ಆರ್.ಪಿ. ನಲವಡೆ, ಕಿರಣ ಚಲವಾದಿ, ಎಂ.ಎಂ. ಜಾವೂರ, ರಮೇಶ ಗಡೇಕಾರ, ನಂದೀಶ ಮಠದ, ಮುತ್ತಣ್ಣ ರಾಯರಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts