ಕರೊನಾ ಸೋಂಕಿನ ಭೀತಿಯಲ್ಲಿ ಶಾಸಕ ಎಚ್‌.ಡಿ.ರೇವಣ್ಣ

revanna
Published on

ಹಾಸನ: ಶಾಸಕ ಎಚ್‌.ಡಿ.ರೇವಣ್ಣ ಅವರಿಗೆ ಸದ್ಯ ಕರೊನಾ ಭೀತಿ ಶುರುವಾಗಿದೆ. ಇದಕ್ಕೆ ಕಾರಣ, ಅವರ ಬೆಂಗಾವಲು ವಾಹನದ ನಾಲ್ವರು ಪೊಲೀಸರಿಗೆ ಕರೊನಾ ಸೋಂಕು ದೃಢಪಟ್ಟಿರುವುದು.

ರೇವಣ್ಣ ಅವರ ಜತೆ, ಅವರು ಈಚೆಗೆ ಕರೆದಿರುವ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಪತ್ರಕರ್ತರಲ್ಲಿಯೂ ಆತಂಕ ಶುರುವಾಗಿದೆ.

ರೇವಣ್ಣ ಅವರ ಎಸ್ಕಾರ್ಟ್ ವಾಹನದಲ್ಲಿ ಕಾರ್ಯನಿರ್ವಹಿಸುವ ನಾಲ್ವರು ಸಿಬ್ಬಂದಿಗಳ ಪೈಕಿ ಬೆಂಗಳೂರಿನ ಮೂವರು ಹಾಗೂ ಹಾಸನದ ಒಬ್ಬ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಸದ್ಯ ಬೆಂಗಳೂರಿನಲ್ಲಿ ಇರುವ ರೇವಣ್ಣ ಅವರು ಇದರಿಂದ ವೈರಸ್‌ ಭೀತಿ ಅನುಭವಿಸುತ್ತಿದ್ದಾರೆ.

ಪೊಲೀಸರಲ್ಲಿ ಕರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೇವಣ್ಣ ಅವರ ಬೆಂಗಾವಲು ಪಡೆಯ ಒಂಬತ್ತು ಸಿಬ್ಬಂದಿಗೆ ಸೋಂಕಿನ ಪರೀಕ್ಷೆ ಮಾಡಿಸಲಾಗಿತ್ತು. ಇವರಲ್ಲಿ ಈ ಪೈಕಿ ಇಬ್ಬರು ರೇವಣ್ಣ ಅವರ ಆಪ್ತ ಸಹಾಯಕರು. ಈ ಪೈಕಿ ನಾಲ್ವರು ಪೊಲೀಸರಿಗೆ ಸೋಂಕು ತಗುಲಿರುವುದು ತಿಳಿದುಬಂದಿದೆ.

ಇಂದು ರೇವಣ್ಣ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net