

ನವದೆಹಲಿ: ಭಾರತದಲ್ಲಿ ಕರೊನಾ ಲಸಿಕೆಯ ಸಾಮೂಹಿಕ ವ್ಯಾಕ್ಸಿನೇಷನ್ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆ ಇದ್ದು, 50ಕ್ಕೂ ಹೆಚ್ಚು ವರ್ಷ ವಯಸ್ಸಾದ ಹಾಗೂ ತೀವ್ರ ಮಧುಮೇಹ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಿರುವ ರಾಜ್ಯಗಳಿಗೆ ಅಧಿಕ ಪ್ರಮಾಣದ ಡೋಸ್ಗಳು ದೊರೆಯುವ ನಿರೀಕ್ಷೆ ಇದೆ. ಬಿಹಾರ, ಮಧ್ಯಪ್ರದೇಶ ಹಾಗೂ ರಾಜಸ್ಥಾನಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿದ್ದರೂ ತಮಿಳುನಾಡು ಹೆಚ್ಚು ಡೋಸ್ಗಳನ್ನು ಪಡೆಯಲಿದೆ. ಏಕೆಂದರೆ ಬಿಹಾರದಲ್ಲಿ 12.30 ಕೋಟಿ ಜನಸಂಖ್ಯೆ ಇದ್ದು, ಅದರಲ್ಲಿ 1.80 ಕೋಟಿ ಜನರು ಮಾತ್ರ 50ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಆದರೆ, ಬಿಹಾರಕ್ಕಿಂತ ಶೇಕಡ 60 ಕಡಿಮೆ ಜನಸಂಖ್ಯೆ ಹೊಂದಿರುವ ತಮಿಳುನಾಡಿನಲ್ಲಿ 2 ಕೋಟಿ ಮಂದಿ 50 ವರ್ಷಕ್ಕಿಂತ ಮೇಲ್ಪಟ್ಟವರಿದ್ದಾರೆ. ಜತೆಗೆ ಬಿಹಾರದಲ್ಲಿ ಇತರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರ ಸಂಖ್ಯೆ ಕಡಿಮೆ ಇದೆ. ಕೇರಳದಲ್ಲಿ 50 ವರ್ಷ ಮೇಲ್ಪಟ್ಟ ಪ್ರತಿ ಮೂವರಲ್ಲಿ ಒಬ್ಬರು ಮಧುಮೇಹ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ದೇಶದಲ್ಲಿನ ಒಟ್ಟು ಜನಸಂಖ್ಯೆಯ ಶೇಕಡ 19.5ರಷ್ಟಿರುವ 50 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕೆ ನೀಡಲಾಗುತ್ತದೆ. ಅಂದರೆ 26.50 ಕೋಟಿ ಮಂದಿ ಲಸಿಕೆ ಪಡೆಯಲಿದ್ದಾರೆ. ಇವರ ಜತೆಗೆ ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ, ಪೌರ ಕಾರ್ವಿುಕರು ಸೇರಿದಂತೆ 1 ಕೋಟಿ ಜನರು ಮೊದಲು ಲಸಿಕೆ ಪಡೆಯುವವರ ಪಟ್ಟಿಯಲ್ಲಿದ್ದಾರೆ. ಅಲ್ಲದೇ 50 ವರ್ಷಕ್ಕಿಂತ ಒಳಗಿನ ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಸುಮಾರು 4 ಕೋಟಿ ಮಂದಿಗೂ ಲಸಿಕೆ ನೀಡಲಾಗುತ್ತದೆ. ಈ ಮೂಲಕ ಮೊದಲ ಆದ್ಯತೆಯ ಒಟ್ಟು 30 ಕೋಟಿ ಜನರಿಗೆ ಲಸಿಕೆ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಗೂಗಲ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ನೀಡಿದ್ದ ವರ್ಕ್ ಫ್ರಮ್ ಹೋಮ್ ಸೌಲಭ್ಯವನ್ನು ಮುಂದಿನ ವರ್ಷ ಸೆಪ್ಟೆಂಬರ್ವರೆಗೆ ವಿಸ್ತರಿಸಿದೆ. ಪರಿಸ್ಥಿತಿ ಸುಧಾರಿಸುತ್ತಲೇ ‘ಅನುಕೂಲಕರ ಕರ್ತವ್ಯದ ವಾರ’ ಅನ್ನು ಜಾರಿಗೆ ತರಲು ಚಿಂತಿಸುತ್ತಿದ್ದೇವೆ. ಅದರ ಅನ್ವಯ ಮನೆಯಿಂದಲೇ ಕೆಲಸ ನಿರ್ವಹಿಸುವ ಉದ್ಯೋಗಿಗಳು ವಾರದಲ್ಲಿ ಕನಿಷ್ಠ ಮೂರು ದಿನ ಕಚೇರಿಗೆ ಬಂದು ಕೆಲಸ ಮಾಡಬೇಕಾಗುತ್ತದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
ಕರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮನೆಯಿಂದ ಕೆಲಸ ನಿರ್ವಹಿಸಲು, ಕಲಿಕೆ, ಮನರಂಜನೆ ಹಾಗೂ ಇತರ ವಿಷಯಗಳಿಗಾಗಿ ಜನರು ಸ್ಮಾರ್ಟ್ಫೋನ್ ಬಳಸುವ ಅವಧಿ ಏರಿಕೆಯಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಭಾರತೀಯರಲ್ಲಿ ಸ್ಮಾರ್ಟ್ಫೋನ್ ಬಳಕೆ ದಿನಕ್ಕೆ ಶೇ.25ರಷ್ಟು ಏರಿಕೆ ಕಂಡಿದ್ದು, ದಿನವೊಂದರಲ್ಲಿ ಸುಮಾರು 7 ತಾಸು ಪೋನ್ನಲ್ಲಿ ತಲ್ಲೀನರಾಗಿರುತ್ತಾರೆ. 2019 ಮಾರ್ಚ್ನಲ್ಲಿದ್ದ 4.9 ತಾಸಿನಿಂದ 2020 ಮಾರ್ಚ್ ವೇಳೆಗೆ ಸ್ಮಾರ್ಟ್ ಫೋನ್ ಬಳಕೆ ಅವಧಿ ಶೇ.11 ಅಂದರೆ 5.5 ತಾಸಿಗೆ ಏರಿಕೆಯಾಗಿತ್ತು. ಲಾಕ್ಡೌನ್ ಬಳಿಕ ಇದು ಶೇ.25 ಏರಿಕೆ ಕಂಡು 7 ತಾಸಿಗೆ ಏರಿದೆ ಎಂದು ತಿಳಿದುಬಂದಿದೆ.
| ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ಸಹಸಂಸ್ಥಾಪಕ