

ಲಂಡನ್: ಬ್ರಿಟನ್ನಲ್ಲಿ ಕರೊನಾ ವೈರಸ್ನ ರೂಪಾಂತರಿತ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಭಾರಿ ಸಮಸ್ಯೆ ಉಂಟಾಗಿದೆ ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಹಲವು ಯುರೋಪ್ ದೇಶಗಳು ಬ್ರಿಟನ್ಗೆ ಭಾನುವಾರದಿಂದಲೇ ವಿಮಾನ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿವೆ. ಮೊದಲು ನೆದರ್ಲೆಂಡ್ ವಿಮಾನ ಸಂಚಾರ ನಿಲ್ಲಿಸಿದ್ದು, ಜರ್ಮನಿ ಸರ್ಕಾರ ಸದ್ಯದಲ್ಲೇ ಅಧಿಕೃತ ಘೋಷಣೆ ಮಾಡಲಿದೆ. ದಕ್ಷಿಣ ಆಫ್ರಿಕಾ ಕೂಡ ವಿಮಾನ ಸಂಚಾರ ನಿಷೇಧಿಸಲು ಚಿಂತಿಸುತ್ತಿದೆ. ನೆದರ್ಲೆಂಡ್ ನಿಷೇಧ ಜನವರಿ 1ರ ವರೆಗೆ ಮುಂದುವರಿಯಲಿದೆ. ಬ್ರಿಟನ್ನಿಂದ ಬರುವ ವಿಮಾನ ಹಾಗೂ ರೈಲುಗಳ ಮೇಲೆ ಬೆಲ್ಜಿಯಂ ನಿಷೇಧ ಹೇರಿದೆ. ಬ್ರಿಟನ್ನಲ್ಲಿ ವೈರಸ್ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಆರೋಗ್ಯ ಸಚಿವ ಮ್ಯಾಟ್ ಹ್ಯಾನಕ್ ಹೇಳಿದ್ದಾರೆ.
ರಷ್ಯಾದಲ್ಲಿ 50 ಸಾವಿರ ಸಾವು: ಕರೊನಾ ವೈರಸ್ನಿಂದ ರಷ್ಯಾದಲ್ಲಿ ಮೃತಪಟ್ಟವರ ಸಂಖ್ಯೆ 50 ಸಾವಿರ ದಾಟಿದೆ. 50,858 ಜನರು ಬಲಿಯಾಗಿದ್ದಾರೆಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ಆದರೆ ಸಾವಿನ ಪ್ರಮಾಣ ಇನ್ನೂ ಹೆಚ್ಚಾಗಿರಬಹುದೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಅಮೆರಿಕ ಪ್ಯಾಕೇಜ್: ಲಕ್ಷಾಂತರ ಜನರಿಗೆ ಪರಿಹಾರ ಒದಗಿಸಲು 900 ಬಿಲಿಯನ್ ಡಾಲರ್ ಪ್ಯಾಕೇಜ್ಗೆ ಅಮೆರಿಕದ ಸಂಸದರು ಸಮ್ಮತಿಸಿದ್ದಾರೆಂದು ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ದೇಶದ ಕೇಂದ್ರೀಯ ಬ್ಯಾಂಕ್ ಆದ ಫೆಡರಲ್ ರಿಸರ್ವ್ ಈ ಹಣವನ್ನು ನೀಡಲಿದೆ.
ಸಾವಿನ ಸಾಧ್ಯತೆ ಪುರುಷರಲ್ಲಿ ಅಧಿಕ: ಕೋವಿಡ್-19ನಿಂದ ಸಾಯುವ ಸಾಧ್ಯತೆ ಪ್ರಮಾಣ ಸಮಾನ ವಯೋಮಾನದ ಮಹಿಳೆಯರಿಗಿಂತ ಪುರುಷರಲ್ಲಿ ಶೇಕಡ 30 ಹೆಚ್ಚಿರುತ್ತದೆ ಎಂದು ಅಧ್ಯಯನ ವೊಂದು ತಿಳಿಸಿದೆ. ಆಸ್ಪತ್ರೆಗೆ ದಾಖಲಾದ ಕೋವಿಡ್ ರೋಗಿಗಳು ಪುರುಷರಾಗಿದ್ದಲ್ಲಿ ಮತ್ತು ಅವರು ಬೊಜ್ಜು, ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅಂಥವರಲ್ಲಿ ಸಾವಿನ ಸಾಧ್ಯತೆ ಹೆಚ್ಚಿರುತ್ತದೆ ಎಂದು ವೈದ್ಯಕೀಯ ನಿಯತಕಾಲಿಕೆಯಲ್ಲಿ ವರದಿ ಪ್ರಕಟವಾಗಿದೆ.
ಲಾಕ್ಡೌನ್ ಹೇರುವುದಿಲ್ಲ, ಆದರೆ ಮುಂದಿನ ಆರು ತಿಂಗಳು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಸಂರಕ್ಷಿತ ಸ್ಮಾರಕಗಳಿಗೆ ಭೇಟಿ ನೀಡುವ ಜನರ ಸಂಖ್ಯೆಯ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಭಾರತೀಯ ಪ್ರಾಚ್ಯವಸ್ತು ಇಲಾಖೆ (ಎಎಸ್ಐ) ಭಾನುವಾರ ತೆಗೆದು ಹಾಕಿದೆ.