ತುಮಕೂರಿನಲ್ಲಿ 20 ಸಾವಿರ ಸನಿಹಕ್ಕೆ ಕರೊನಾ !

Corona1
Published on

ತುಮಕೂರು: ಬುಧವಾರ ಜಿಲ್ಲೆಯಲ್ಲಿ 124 ಜನರಿಗೆ ಕರೊನಾ ಸೋಂಕು ತಗುಲಿದ್ದು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 234 ಜನರು ಬಿಡುಗಡೆಯಾಗಿ ಮನೆಗೆ ವಾಪಸಾದರು ಜತೆಗೆ ಮೂವರನ್ನು ಮಹಾಮಾರಿ ಬಲಿ ತೆಗೆದುಕೊಂಡಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 20 ಸಾವಿರ ಗಡಿ ಸನಿಹ ತಲುಪಿದೆ.

ಶಿರಾ ತಾಲೂಕು ಸಪ್ತಗಿರಿ ಬಡಾವಣೆ 65 ವರ್ಷದ ಮಹಿಳೆ, ಮಧುಗಿರಿ ನಗರದ 78 ವರ್ಷದ ಗಂಡು ಹಾಗೂ ತುರುವೇಕೆರೆ ನಗರದ 63 ವರ್ಷದ ಗಂಡು ಬುಧವಾರ ಸಾವನ್ನಪ್ಪಿದ್ದು 79 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಚಿಕ್ಕನಾಯಕನಹಳ್ಳಿ 7, ಗುಬ್ಬಿ 6, ಕೊರಟಗೆರೆ 9, ಕುಣಿಗಲ್ 5, ಮಧುಗಿರಿ 5, ಪಾವಗಡ 9, ಶಿರಾ 11, ತಿಪಟೂರು 13, ತುಮಕೂರು 52 ಹಾಗೂ ತುರುವೇಕೆರೆ ತಾಲೂಕಿನಲ್ಲಿ 7 ಜನರಿಗೆ ಸೋಂಕು ದೃಢವಾಗಿದೆ. ಈವರೆಗೆ ಸೋಂಕಿತರ ಸಂಖ್ಯೆ 19597ಕ್ಕೇರಿದೆ. ಇನ್ನೂ ಗುಣಮುಖರ ಸಂಖ್ಯೆ 18029ಕ್ಕೆ ತಲುಪಿದೆ.

ಬುಧವಾರದ ಸೋಂಕಿತರ ಪೈಕಿ 66 ಪುರುಷರು, 58 ಮಹಿಳೆಯರಿಗೆ ಸೋಂಕು ತಗುಲಿದ್ದು ಐದು ವರ್ಷದೊಳಿಗಿನ 3 ಮಕ್ಕಳು, 60 ವರ್ಷ ಮೇಲ್ಪಟ್ಟ 24 ಹಿರಿಯರಿಗೆ ಸೋಂಕಿನ ಸಂಪರ್ಕಕ್ಕೆ ಸಿಕ್ಕಿದ್ದು ಇವರ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net