ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ಗೆ ಕರೊನಾ ಪಾಸಿಟಿವ್​

sachin web
Published on

ಮುಂಬೈ: ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಸಚಿನ್​ ಅವರೇ ತನ್ನ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

'ನಾನು ಕರೊನಾ ಟೆಸ್ಟ್​ ಮಾಡಿಸಿಕೊಂಡಿದ್ದೆ. ಶನಿವಾರ ವರದಿ ಬಂದಿದ್ದು, ಪಾಸಿಟಿವ್​ ಎಂದಿದೆ. ಹಾಗಾಗಿ ಮನೆಯಲ್ಲೇ ಕ್ವಾರಂಟೈನ್​ ಆಗಿದ್ದೇನೆ. ಮನೆಯಲ್ಲಿ ಇರುವವರ ವರದಿ ನೆಗೆಟಿವ್​ ಬಂದಿದೆ. ವೈದ್ಯರ ಸಲಹೆಯಂತೆ ಮನೆಯಲ್ಲೇ ಪ್ರತ್ಯೇಕವಾಗಿದ್ದು, ಕರೊನಾ ನಿಯಮ ಪಾಲಿಸುತ್ತಿದ್ದೇನೆ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸುತ್ತಿದ್ದೇನೆ' ಎಂದು ಸಚಿನ್​ ತೆಂಡೂಲ್ಕರ್​ ತಿಳಿಸಿದ್ದಾರೆ.

'ಮಹಾಮಾರಿ ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯ ಸಿಬ್ಬಂದಿ ಮತ್ತು ನನ್ನ ಅಭಿಮಾನಿಗಳಿಗೆ ಕೃತಜ್ಞತೆಗಳು. ಎಲ್ಲರೂ ಕರೊನಾ ಸೋಂಕಿನ ಬಗ್ಗೆ ಜಾಗ್ರತೆ ವಹಿಸಿ, ಆರೋಗ್ಯದ ಕಾಳಜಿ ಬಗ್ಗೆ ಎಚ್ಚರವಹಿಸಿ' ಎಂದು ಸಚಿನ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net