ಪ್ರಮೋದ್​ ಮುತಾಲಿಕ್​ ಆಸ್ಪತ್ರೆಗೆ ದಾಖಲು

8 Dwd 2 (Pramod Mutalik)
Published on

ಬೆಂಗಳೂರು: ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರಿಗೆ ಕರೊನಾ ಸೋಂಕು ದೃಢಪಟ್ಟಿದೆ.

ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಕೋವಿಡ್​ ಪರೀಕ್ಷೆಗೆ ಒಳಗಾಗಿದ್ದ ಮುತಾಲಿಕ್​ರ ವರದಿ ಪಾಸಿಟಿವ್​ ಬಂದಿದ್ದು, ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಸ್ವತಃ ಮುತಾಲಿಕ್​ ಅವರು ಆಸ್ಪತ್ರೆಯಿಂದಲೇ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನು ಓದಿರಿ 18ರಂದು 18 ರಾಜ್ಯಗಳಲ್ಲಿ ಕರೊನಾ ಸೋಂಕು ಹೆಚ್ಚಳ! ಅಮೆರಿಕವನ್ನೂ ಹಿಂದಿಕ್ಕುತ್ತಾ ಭಾರತ?

'ನಮಸ್ಕಾರ, ಒಂದು ವಾರದಿಂದ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಹಾಗಾಗಿ ಕೋವಿಡ್​ ಟೆಸ್ಟ್​ ಮಾಡಿಸಿಕೊಂಡೆ. ವರದಿ ಪಾಸಿಟಿವ್​ ಬಂದಿದೆ. ಇವತ್ತು ಆಸ್ಪತ್ರೆಗೆ ದಾಖಲಾಗಿದ್ದೇನೆ. ಒಂದು ವಾರ ಇಲ್ಲೇ ಇರುವೆ. ಆಸ್ಪತ್ರೆ ಸಿಬ್ಬಂದಿಯ ಸಹಕಾರ, ಹಿರಿಯರ ಆಶೀರ್ವಾದದಿಂದ ಗುಣಮುಖನಾಗಿ ಬರ್ತೀನಿ' ಎಂದು ಪ್ರಮೋದ್​ ಮುತಾಲಿಕ್​ ಹೇಳಿದ್ದಾರೆ.

ಮೈಸೂರಿನಲ್ಲಿ ಕಳೆದ ವಾರ ಡ್ರಗ್ಸ್​ ಮಾಫಿಯಾ ವಿರುದ್ಧ ಜನಜಾಗೃತಿ ಅಭಿಯಾನ ಆರಂಭಿಸಿದ್ದ ಪ್ರಮೋದ್​ ಮುತಾಲಿಕ್​ ಅವರು ಕೆಲ ದಿನ ಅಲ್ಲೇ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net