ಸಂಸದ ಡಾ.ಉಮೇಶ್ ಜಾಧವ್​ ಕುಟುಂಬದ 12 ಮಂದಿಗೆ ಕರೊನಾ ಪಾಸಿಟಿವ್​

corna positve for umesha jadhav family
Published on

ಕಲಬುರಗಿ: ಸಂಸದ ಡಾ.ಉಮೇಶ್ ಜಾಧವ್​ ಕುಟುಂಬದ ಬಹುತೇಕ ಸದಸ್ಯರಿಗೂ ಕರೊನಾ ಸೋಂಕು ತಗುಲಿದೆ.

ಡಾ.ಉಮೇಶ್ ಜಾಧವ್ ಮತ್ತು ಅವರ ಪುತ್ರ, ಚಿಂಚೋಳಿ ಶಾಸಕ ಡಾ.ಅವಿನಾಶ್ ಜಾಧವ್ ಕರೊನಾ ಸೋಂಕಿನಿಂದ ಬಳಲುತ್ತಿದ್ದು, ಬೆಂಗಳೂರಿನ ಬೋರಿಂಗ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಸಂಸದರ ಪತ್ನಿ, ಮಗಳು, ಸೊಸೆ(ಡಾ.ಅವಿನಾಶ್ ಪತ್ನಿ)‌ ಸೇರಿ ಕುಟುಂಬ ಮತ್ತು ಆಪ್ತ ಸಿಬ್ಬಂದಿ ಸೇರಿ 12 ಜನರಿಗೂ ಕರೊನಾ ಇರುವುದು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಸಂಸದರೇ ಟ್ವೀಟ್ ಮಾಡಿದ್ದು, ತಮ್ಮ ಕುಟುಂಬದ ಒಟ್ಟು 12 ಜನರಿಗೆ ಸೋಂಕು ದೃಢಪಟ್ಟಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿರಿ video/ ಶಾಸಕ ಡಾ.ರಂಗನಾಥ್​ರಿಂದ ಪ್ಲಾಸ್ಮಾ ದಾನ

ಉಮೇಶ್ ಜಾಧವ್​ರ ಪತ್ನಿ, ಮಗಳು, ಸಹೋದರನ ಪುತ್ರಿ, ಮೊಮ್ಮಕ್ಕಳು, ಸೊಸೆಗೂ ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ ಸಂಸದರ ಇಬ್ಬರು ಆಪ್ತ ಸಹಾಯಕರು ಮತ್ತು ಶಾಸಕ ಡಾ.ಅವಿನಾಶ್ ಅವರ ಆಪ್ತ ಸಹಾಯಕ, ಕಾರು ಚಾಲಕನಿಗೂ ಸೋಂಕು ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆ.19ರಂದು ಉಮೇಶ್ ಜಾಧವ್ ಮತ್ತು ಅವಿನಾಶ್ ಜಾಧವ್​ಗೆ ಸೋಂಕು ದೃಢಪಟ್ಟಿತ್ತು. ಸೋಂಕಿತರನ್ನು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಜಾಧವ್ ಕುಟುಂಬ ಸದಸ್ಯರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಬೆಂಬಲಿಗರಲ್ಲಿ ಆತಂಕ ಮೂಡಿದೆ. ಸಂಸದರ ಮತ್ತು ಶಾಸಕರ ಕುಟುಂಬ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಚಿಂಚೋಳಿ ಕ್ಷೇತ್ರದ ವಿವಿಧೆಡೆ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net