More

    video/ ಶಾಸಕ ಡಾ.ರಂಗನಾಥ್​ರಿಂದ ಪ್ಲಾಸ್ಮಾ ದಾನ

    ಬೆಂಗಳೂರು: ಕರೊನಾ ಸೋಂಕಿನಿಂದ ಗುಣಮುಖರಾದ ಕುಣಿಗಲ್​ ಶಾಸಕ ಡಾ. ರಂಗನಾಥ್ ಇಂದು(ಬುಧವಾರ) ಪ್ಲಾಸ್ಮಾ ದಾನ ಮಾಡಿದರು. ಆ ಮೂಲಕ ‘ದೇಶದಲ್ಲಿ ಪ್ಲಾಸ್ಮಾ ದಾನ ಮಾಡಿದ ಮೊದಲ ಶಾಸಕ’ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

    ಕಳೆದ ತಿಂಗಳು ಕರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಶಾಸಕ ಡಾ. ರಂಗನಾಥ್‌ ಹಾಗೂ ಸಹೋದರ ಡಾ.ರಾಮಚಂದ್ರ ಪ್ರಭು ಅವರು ತಮ್ಮ ದೇಹದ ಪ್ಲಾಸ್ಮಾವನ್ನು ಕರೊನಾ ರೋಗಿಗಳಿಗೆ ದಾನ ಮಾಡಿದರು. ಬೆಂಗಳೂರಿನ ಕಾರ್ಪೋರೇಷನ್ ಕೇಂದ್ರ ಕಚೇರಿ ಹಿಂಭಾಗದಲ್ಲಿರುವ ಎಚ್.ಸಿ.ಜಿ. (HCG) ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಪ್ರಕ್ರಿಯೆ ನಡೆಯಿತು.

    ಇದನ್ನೂ ಓದಿರಿ ಡಿಜೆ ಹಳ್ಳಿ ಗಲಭೆಯ 40ಕ್ಕೂ ಹೆಚ್ಚು ಆರೋಪಿಗಳಿಗೆ ಭಯೋತ್ಪಾದನೆ ಚಟುವಟಿಕೆ ಲಿಂಕ್?

    ಪ್ಲಾಸ್ಮಾ ದಾನ ಮಾಡುವ ಮುನ್ನ ಮಾಧ್ಯಮಗಳ ಜತೆ ಆಸ್ಪತ್ರೆಯಲ್ಲೇ ಮಾತನಾಡಿದ ಶಾಸಕ ರಂಗನಾಥ್, ನನಗೆ ಕೋವಿಡ್​ ಪಾಸಿಟಿವ್​ ಬಂದ ನಂತರ

    video/ ಶಾಸಕ ಡಾ.ರಂಗನಾಥ್​ರಿಂದ ಪ್ಲಾಸ್ಮಾ ದಾನ
    ಡಾ.ರಂಗನಾಥ್​ರ ಸಹೋದರ ಡಾ.ರಾಮಚಂದ್ರ ಪ್ರಭು ಕೂಡ ಪ್ಲಾಸ್ಮಾ ದಾನ ಮಾಡಿದರು.

    ಬಹಳ ಸಲ ಯೋಚನೆ ಮಾಡ್ತಿದ್ದೆ. ನಮ್ಮ ಕಡೆಯಿಂದ ಕೋವಿಡ್​ ರೋಗಿಗಳಿಗೆ ಯಾವ ರೀತಿ ಸಹಾಯ ಮಾಡಬಹುದೆಂದು ಹಲವು ರೀತಿಯಲ್ಲಿ ಯೋಚಿಸಿದೆ. ಕೋವಿಡ್​ ನೆಗೆಟಿವ್​ ಬಂದ ಬಳಿಕ ಹ್ಯೂಮಿನಿಟಿ ಎಷ್ಟಿದೆ ಎಂದು ಚೆಕ್​ ಮಾಡಿಸಿದೆ. ನನಗೆ ಹೆಚ್ಚಿದೆ ಎಂದು ತಿಳೀತು. ಹಾಗಾಗಿ ಇತರ ಕರೊನಾ ರೋಗಿಗಳ ಚಿಕಿತ್ಸೆಗೆ ನೆರವಾಗಲೆಂದು ಪ್ಲಾಸ್ಮಾ ಕೊಡುತ್ತಿದ್ದೇನೆ ಎಂದರು.

    ಪ್ಲಾಸ್ಮಾ ದಾನ ಮಾಡುವಾಗ ಶಾಸಕ ಡಾ.ರಂಗನಾಥ್ ಹೇಳಿದ್ದೇನು?

    ಪ್ಲಾಸ್ಮಾ ದಾನ ಮಾಡುವಾಗ ಶಾಸಕ ಡಾ.ರಂಗನಾಥ್ ಹೇಳಿದ್ದೇನು? ಕರೊನಾ ಸೋಂಕಿತರಿಗಾಗಿ ದೇಶದಲ್ಲೇ ಪ್ಲಾಸ್ಮಾ ದಾನ ಮಾಡಿದ ಮೊದಲ ಶಾಸಕ ಕರ್ನಾಟಕದವರು. ಅವರೇ ಕುಣಿಗಲ್​ ಕ್ಷೇತ್ರದ ಶಾಸಕ ಡಾ.ರಂಗನಾಥ್​. ಬೆಂಗಳೂರಿನ ಕಾರ್ಪೋರೇಷನ್ ಕೇಂದ್ರ ಕಚೇರಿ ಹಿಂಭಾಗದಲ್ಲಿರುವ ಎಚ್.ಸಿ.ಜಿ. ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಮಾಡುವ ವೇಳೆ ಶಾಸಕರು ಹೇಳಿದ್ದು ಹೀಗೆ. ಶಾಸಕರ ಸಹೋದರ ಡಾ.ರಾಮಚಂದ್ರ ಪ್ರಭು ಕೂಡ ಇದೇ ವೇಳೆ ಪ್ಲಾಸ್ಮಾ ದಾನ ಮಾಡಿದರು. #MLARanganath #Plasma #Covid #KunigalMLAhttps://bit.ly/317EzE4

    Posted by Vijayavani on Wednesday, August 19, 2020

    ಆರೋಪಿ ನವೀನ್​ನನ್ನು ಗಲಭೆಕೋರರಿಂದ ಬಚಾವ್​ ಮಾಡಿದ್ದೇ ಅಖಂಡ ಶ್ರೀನಿವಾಸ ಮೂರ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts