

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ ಭೈರಸಂದ್ರ ಗಲಭೆ ಪ್ರಕರಣ ಕ್ಷಣ ಕ್ಷಣಕ್ಕೂ ಸ್ಫೋಟಕ ತಿರುವು ಪಡೆಯುತ್ತಿದೆ. ಗಲಭೆ ಪ್ರಕರಣದ 4೦ಕ್ಕೂ ಹೆಚ್ಚು ಆರೋಪಿಗಳಿಗೆ ಭಯೋತ್ಪಾದನೆ ಚಟುವಟಿಕೆಗಳ ಲಿಂಕ್ ಇದೆ ಎಂಬ ಆಘಾತಕಾರಿ ವಿಚಾರ ಸಿಸಿಬಿಯ ಟೆಕ್ನಿಕಲ್ ಇನ್ವೆಸ್ಟಿಗೇಶನ್ನಲ್ಲಿ ಬಯಲಾಗಿದೆ
ರುದ್ರೇಶ್ ಹತ್ಯೆ ಪ್ರಕರಣ ಸೇರಿ ಕೆಲ ವಿದ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಜೊತೆ ಬೆಂಗಳೂರಿನ ಗಲಭೆ ಪ್ರಕರಣದ ಕೆಲ ಆರೋಪಿಗಳ ಒಡನಾಟ ಇತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
ಗಲಭೆಯಲ್ಲಿ ಭಾಗಿಯಾದ ನಂತರ ಬಹುತೇಕ ಆರೋಪಿಗಳು ನಾಪತ್ತೆಯಾಗಿದ್ದಾರೆ. ಈಗಾಗಲೇ ಬಂಧಿತನಾಗಿರುವ ಸಮಿಯುದ್ದೀನ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ರುದ್ರೇಶ್ ಹತ್ಯೆ ಆರೋಪಿಗಳು ಜೈಲಿನಲ್ಲಿದ್ದಾರೆ. ವಿಸಿಟರ್ ರೀತಿ ಜೈಲಿಗೆ ಹೋಗುತ್ತಿದ್ದ ಸಮಿಯುದ್ದೀನ್, ರುದ್ರೇಶ್ ಹತ್ಯೆ ಆರೋಪಿಗಳನ್ನೂ ಭೇಟಿಯಾಗಿದ್ದಾನೆ. ಇದಲ್ಲದೆ ಗಲಭೆಯ ಕೆಲ ಆರೋಪಿಗಳು, ಜೈಲಿನಲ್ಲಿದ್ದ ವಿವಿಧ ಶಂಕಿತ ಉಗ್ರರನ್ನೂ ಭೇಟಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಗಲಭೆ ವೇಳೆಯ ಕೆಲ ಆರೋಪಿಗಳ ವಿಡಿಯೋ ಮತ್ತು ಜೈಲಿನಲ್ಲಿ ಆರೋಪಿಗಳನ್ನು ಭೇಟಿ ಮಾಡೋಕೆ ಹೋದ ವೇಳೆ ಅಲ್ಲಿನ ಸಿಸಿಟಿವಿಯ ದೃಶ್ಯಗಳು ಹೊಲಿಕೆಯಾಗುತ್ತಿವೆ. ಸದ್ಯ ಸಿಸಿಬಿಯ anti terrorist cellನಿಂದ ಸಮಿಯುದ್ದೀನ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.