ಜಿ.ಟಿ.ದೇವೇಗೌಡಗೆ ಕರೊನಾ ಪಾಸಿಟಿವ್​

GT Devegowda
Published on

ಮೈಸೂರು: ಮಹಾಮಾರಿ ಕರೊನಾ ಸೋಂಕು ರಾಜಕಾರಣಿಗಳನ್ನೂ ಬಿಟ್ಟುಬಿಡದೆ ಕಾಡುತ್ತಿದೆ. ರಾಜ್ಯದ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾದಿಯಾಗಿ ಬಹುತೇಕ ರಾಜಕಾರಣಿಗಳಿಗೂ ಸೋಂಕು ತಗುಲಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಶಾಸಕ ಜಿ.ಟಿ.ದೇವೇಗೌಡ ಅವರಿಗೂ ಕರೊನಾ ಪಾಸಿಟಿವ್​ ಬಂದಿದೆ.

ಚಾಮುಂಡೇಶ್ವರಿ ಕೇತ್ರದ ಶಾಸಕ ದೇವೇಗೌಡಗೆ ಕರೊನಾ ದೃಢಪಟ್ಟಿದ್ದು, ಮೈಸೂರು ಜಿಲ್ಲೆಯಲ್ಲಿ ಸೋಂಕು ತಗುಲಿದ ಮೊದಲ ಶಾಸಕ ಇವರು.

ತಮಗೆ ಸೋಂಕು ದೃಢಪಟ್ಟಿರುವ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಜಿಟಿಡಿ, 'ನಾನು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದು ವರದಿ ಪಾಸಿಟಿವ್ ಬಂದಿದೆ. ರೋಗ ಲಕ್ಷಣ ಇಲ್ಲದಿದ್ದರೂ ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ 7 ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿರುವವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ಕೂಡಲೇ ಕ್ವಾರಂಟೈನ್​ಗೆ ಒಳಗಾಗುವ ಮೂಲಕ ಮುಂಜಾಗ್ರತೆ ವಹಿಸಿ' ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net