ಸಿಎಂ ಯಡಿಯೂರಪ್ಪಗೆ ವರ್ಕ್​ ಫ್ರಮ್ ಹಾಸ್ಪಿಟಲ್

bsy in hospital
Published on

ಬೆಂಗಳೂರು: ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರೂ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಮ್ಮ ಕರ್ತವ್ಯಪ್ರಜ್ಞೆ ಮರೆತಿಲ್ಲ, ಕಾರ್ಯತತ್ಪರತೆ ಕೊಂಚವೂ ಕಡಿಮೆ ಆಗಿಲ್ಲ.

ಮಣಿಪಾಲ್​ ಆಸ್ಪತ್ರೆಯಲ್ಲಿ ಕರೊನಾಗೆ ಚಿಕಿತ್ಸೆ ಪಡೆಯುತ್ತಿರುವ ಸಿಎಂ, ತಮ್ಮ ವಾರ್ಡ್​ನಲ್ಲಿ ಗೌನ್​ ತೊಟ್ಟು, ಕೈಯಲ್ಲಿ ಐವಿ ಚುಚ್ಚಿದ್ದರೂ ಮಹತ್ವದ ಕಡತಗಳನ್ನು ಪರಿಶೀಲಿಸುವಲ್ಲಿ ಬಿಜಿಯಾಗಿದ್ದರು.

ಅಧಿಕಾರಿಗಳು ತಮ್ಮ ಕಚೇರಿ ಕಡತಗಳನ್ನು ಆಸ್ಪತ್ರೆ ಸಿಬ್ಬಂದಿ ಮೂಲಕ ಸಿಎಂಗೆ ತಂದುಕೊಟ್ಟರು. ಪ್ರಮುಖ ಕಡತಗಳನ್ನು ಒಂದಾದ ಮೇಲೊಂದರಂತೆ ಸಿಎಂ ಪರಿಶೀಲಿಸಿದರು. ಇಂದು(ಮಂಗಳವಾರ) ಬೆಳಗ್ಗೆ ಮುಖ್ಯಕಾರ್ಯದರ್ಶಿ ಸೇರಿ ಕೆಲವು ಅಧಿಕಾರಿಗಳೊಂದಿಗೆ ಸಿಎಂ ದೂರವಾಣಿಯಲ್ಲಿ ಮಾತನಾಡಿ ವಿಚಾರ ವಿನಿಮಯ ನಡೆಸಿ ಮಾರ್ಗದರ್ಶನ ಮಾಡಿದ್ದಾರೆ.

ತಾವು ಆಸ್ಪತ್ರೆಗೆ ಸೇರಿದ್ದರಿಂದ ಆಡಳಿತ ಯಂತ್ರಕ್ಕೆ ಧಕ್ಕೆಯಾಗಬಾರದು, ಜನರಲ್ಲೂ ಬೇರೆ ಭಾವನೆ ಮೂಡಬಾರದೆಂಬ ನಿಟ್ಟಿನಲ್ಲಿ ತಮ್ಮ ಎಂದಿನ ಕೆಲಸವನ್ನು ಆಸ್ಪತ್ರೆಯಿಂದಲೇ ಸಿಎಂ ಯಡಿಯೂರಪ್ಪ ನಡೆಸಿದ್ದಾರೆ. ಶ್ರೀಘ್ರವೇ ತಾವಿದ್ದಲ್ಲಿಂದಲೇ ಸಚಿವರು ಮತ್ತು ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net