More

    ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧರಾಗಿ: ಸಿಎಂ ಯಡಿಯೂರಪ್ಪ

    ಬೆಂಗಳೂರು: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧರಾಗುವಂತೆ ಬಿಜೆಪಿ ಮುಖಂಡರಿಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹೇಳಿದ್ದಾರೆ.

    ಕರೊನಾ ಉಲ್ಬಣಿಸದಿದ್ದಲ್ಲಿ ರಾಜ್ಯದಲ್ಲಿ ಇಷ್ಟೊತ್ತಿಗೆ ತಾಪಂ ಮತ್ತು ಜಿಪಂ ಚುನಾವಣೆ ರಂಗೇರುತ್ತಿತ್ತು. 2ನೇ ಅಲೆಯ ತೀವ್ರತೆ ಹೆಚ್ಚುತ್ತಿದ್ದಂತೆ ಇನ್ನೂ 6 ತಿಂಗಳ ಕಾಲ ರಾಜ್ಯದಲ್ಲಿ ಯಾವುದೇ ಚುನಾವಣೆ ನಡೆಯಲ್ಲ ಎಂದು ಎರಡು ತಿಂಗಳ ಹಿಂದೆಯೇ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಘೋಷಿಸಿದ್ದರು. ಸದ್ಯ ಲಾಕ್​ಡೌನ್​ ಸಡಿಲಿಕೆ ಆಗುತ್ತಿದ್ದಂತೆ ಚುನಾವಣಾ ಸ್ಪರ್ಧಾಕಾಂಕ್ಷಿಗಳು ತೆರೆಮರೆಯಲ್ಲಿ ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಸ್ವತಃ ಯಡಿಯೂರಪ್ಪ ಅವರೇ ಸಿದ್ಧತೆ ಮಾಡಿಕೊಳ್ಳಲು ಕರೆನೀಡಿದ್ದಾರೆ.

    ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧರಾಗಿ: ಸಿಎಂ ಯಡಿಯೂರಪ್ಪ

    ವರ್ಚುಯಲ್​ ಮೂಲಕ ಶನಿವಾರ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿದ ಸಿಎಂ, ತಾಪಂ-ಜಿಪಂ ಚುನಾವಣೆಗೆ ಎಲ್ಲರೂ ಸಿದ್ಧರಾಗು ಎಂದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಹಲವು ಸವಾಲು ಎದುರಾಗಿವೆ. ಆರಂಭದಲ್ಲೇ ಪ್ರವಾಹದಿಂದ ತೊಂದರೆ ಆಗಿತ್ತು. ಎರಡು ವರ್ಷದಿಂದ ಕರೊನಾ ಸಂಕಷ್ಟಿದೆ. ಎಲ್ಲವನ್ನೂ ದಿಟ್ಟವಾಗಿ ಎದುರಿಸಿ ಅಭಿವೃದ್ಧಿ ಯೋಜನೆಗಳನ್ನು ಮುನ್ನಡೆಸಲಾಗುತ್ತಿದೆ ಎಂದರು.

    ಕಾರ್ಯಕಾರಣಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್​ ಕುಮಾರ್​ ಕಟೀಲ್​, ಪಕ್ಷದ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಮತ್ತು ರಾಜ್ಯ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

    ಕಡೂರಿನಲ್ಲಿ ಅಪ್ರಾಪ್ತ ಬಾಲಕನನ್ನು ಮದ್ವೆಯಾದ ಬೆಂಗಳೂರು ಯುವತಿ! ಮುಂದಾಗಿದ್ದೆಲ್ಲವೂ ಅವಾಂತರ

    ಗ್ರಾಪಂ ಕಾರ್ಯದರ್ಶಿ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್! ಅದೇ ಮನೆಯಲ್ಲಿ ಅಪ್ಪ-ಅಕ್ಕನೂ ನೇಣಿಗೆ ಶರಣಾಗಿದ್ದರು…

    ವಿಷ ಕುಡಿದು ಪ್ರಿಯಕರನ ಮಡಿಲಲ್ಲೇ ರಕ್ತಕಾರಿ ಪ್ರಾಣಬಿಟ್ಟ ಪ್ರೇಯಸಿ! ಇವರಿಬ್ಬರ ಕಥೆ ಭಯಾನಕ

    ದೇವರಿಗೆ ಹುಣ್ಣಿಮೆ ಪೂಜೆ ಸಲ್ಲಿಸಲು ಹೋದ ತಾಯಿ ಜತೆ ಮಕ್ಕಳನ್ನೂ ಹೊತ್ತೊಯ್ದ ಜವರಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts