More

    ಲಾಕ್​ಡೌನ್​ ವಿಸ್ತರಿಸಿ ಅಂತೀರಾ, ಆರ್ಥಿಕತೆ ಸುಧಾರಣೆಗೆ ಏನಪ್ಪಾ ಮಾಡೋದು? ಸಚಿವರಿಗೆ ಸಿಎಂ ಪ್ರಶ್ನೆ

    ಬೆಂಗಳೂರು: ಕರೊನಾ ಸೋಂಕು ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್​ಡೌನ್ ವಿಸ್ತರಣೆ ಭೇಷ್‌ ಅಂತೀರಾ, ಆರ್ಥಿಕ ಚಟುವಟಿಕೆ, ಆರ್ಥಿಕತೆ ಸುಧಾರಣೆಗೆ ಏನಪ್ಪಾ ಮಾಡೋದು?… ಇದು ಲಾಕ್​ಡೌನ್ ವಿಸ್ತರಣೆ ಬೇಡಿಕೆ ಮುಂದಿಟ್ಟ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದ ಪರಿ.

    ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮಂಡ್ಯ, ಬೆಳಗಾವಿ ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಸಿಎಂ ಯಡಿಯೂರಪ್ಪ ಗುರುವಾರ ವಿಡಿಯೋ ಸಂವಾದ ನಡೆಸಿ ಜಿಲ್ಲಾಡಳಿತದಿಂದ ಕರೊನಾ ನಿರ್ವಹಣೆ ಕುರಿತು ಸಮಗ್ರ ಮಾಹಿತಿ ಪಡೆದುರು. ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿಯೂ ಆದ ಡಿಸಿಎಂ ಗೋವಿಂದ ಕಾರಜೋಳ ಲಾಕ್​ಡೌನ್ ಮುಂದುವರಿಸುವುದು ಒಳ್ಳೆಯದು ಎಂದಾಗ ಆರ್ಥಿಕ ಚಟುವಟಿಕೆಗೆ ಏನು ಮಾಡುವುದು? ಎಂದು ಸಿಎಂ ಬಿಎಸ್​ವೈ ಪ್ರಶ್ನಿಸಿದ್ದಾರೆ.

    ಲಾಕ್​ಡೌನ್ ಮುಂದುವರಿಸುತ್ತಾ ಹೋದರೆ ಕಷ್ಟವಾಗಲಿದೆ, ಇದರ ಬದಲು ಹೆಚ್ಚುಹೆಚ್ಚು ಕರೊನಾ ಟೆಸ್ಟ್ ಮಾಡಿ, ನಿಯಂತ್ರಣಕ್ಕೆ ಲಾಕ್​ಡೌನ್ ಹೊರತುಪಡಿಸಿ ಇತರ ಎಲ್ಲ ಕ್ರಮ ಕೈಗೊಳ್ಳಿ ಎಂದು ಸಿಎಂ ಸೂಚನೆ ನೀಡಿದ್ದಾರೆ.

    ಜೂನ್ 14ರ ವರೆಗೆ ಲಾಕ್​ಡೌನ್ ವಿಸ್ತರಿಸಿದ್ದು, ಮತ್ತೆ ಲಾಕ್​ಡೌನ್ ವಿಸ್ತರಣೆ ಮಾಡಲು ಸಿಎಂ ಬಿಎಸ್​ವೈಗೆ ಒಲವಿಲ್ಲ ಎನ್ನುವುದು ಇಂದಿನ ಸಭೆಯಲ್ಲಿ ಸ್ಪಷ್ಟವಾಗಿದೆ. ಕಠಿಣ ನಿಯಮದೊಂದಿಗೆ ಅನ್​ಲಾಕ್ ಪ್ರಕ್ರಿಯೆ ಆರಂಭಿಸುವುದು ಬಹುತೇಕ ಖಚಿತವಾಗಿದೆ.

    ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ

    ರೋಹಿಣಿ ಸಿಂಧೂರಿಯನ್ನ ಆಂಧ್ರಕ್ಕೆ ಕಳಿಸಿ, ಮಕ್ಕಳನ್ನು ಆಟವಾಡಿಸುತ್ತಾ ಅಡುಗೆ ಮಾಡಿಕೊಂಡಿರಲಿ: ಸಾರಾ ಮಹೇಶ್​

    ಬಾವಿಗೆ ಹಾರಿ ಪ್ರಾಣಬಿಟ್ಟ ಗಂಡ, ಮನೆಯ ಮೇಲೆ ನೇಣಿಗೆ ಕೊರಳೊಡ್ಡಿದ ಪತ್ನಿ! ಡೆತ್​ನೋಟ್​ನಲ್ಲಿದೆ ಸಾವಿನ ರಹಸ್ಯ

    ರೋಹಿಣಿ ಸಿಂಧೂರಿ ಮನೆಯ ವಿದ್ಯುತ್​ ಬಿಲ್​ ತಿಂಗಳಿಗೆ 50 ಸಾವಿರ ರೂ., ಈಜುಕೊಳಕ್ಕೆ ಕುಡಿವ ನೀರು ಬಳಕೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts