ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಕಾರು ಚಾಲಕನಿಗೆ ಕರೊನಾ

BHASKARA RAO 1
Published on

ಬೆಂಗಳೂರು: ಪೊಲೀಸರನ್ನೂ ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕರೊನಾ ಸೋಂಕಿನ ಛಾಯೆ ನಗರ ಪೊಲೀಸ್ ಕಮಿಷನರ್ ಭಾಸ್ಕರರಾವ್ ಅವರ ಮೇಲೂ ಆವರಿಸಿದೆ.

ಭಾಸ್ಕರರಾವ್ ಅವರ ಕಾರು ಚಾಲಕನಿಗೆ ಕೋವಿಡ್​ ಸೋಂಕು ದೃಢಪಟ್ಟಿದ್ದು, ಆಯುಕ್ತರು ಸದ್ಯ ಹೋಂ ಕ್ವಾರಂಟೈನ್​ಗೆ ಒಳಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಕರೊನಾ ಚೈನ್​ ಲಿಂಕ್​ ಕತ್ತರಿಲು ಸರ್ಕಾರ, ಬಿಬಿಎಂಪಿ, ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜಧಾನಿಯನ್ನು ಕಂಪ್ಲೀಟ್ ಲಾಕ್​ಡೌನ್ ಮಾಡಲಾಗಿದ್ದು, ಜನರು ಅನಗತ್ಯವಾಗಿ ರಸ್ತೆಗಿಳಿಯದಂತೆ ಎಲ್ಲ ವಾರ್ಡ್​ನಲ್ಲೂ ಪೊಲೀಸ್​ ಕಣ್ಗಾವಲಿದೆ.

ಸದ್ಯ ತಮ್ಮ ಕಾರು ಚಾಲಕನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್​ನಲ್ಲಿರುವ ಭಾಸ್ಕರರಾವ್​ ಅವರು ಮನೆಯಿಂದಲೇ ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆ ಕಾಪಾಡಲು ಸಿಬ್ಬಂದಿಗೆ ಅಗತ್ಯ ನಿದರ್ಶನ ನೀಡಲಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಐದು ಬಾರಿ ಕೋವಿಡ್​ ಪರೀಕ್ಷೆಗೆ ಒಳಪಟ್ಟಿದ್ದಾಗಿ ಟ್ವಿಟರ್​ನಲ್ಲಿ ಹೇಳಿಕೊಂಡಿರುವ ಭಾಸ್ಕರ್ ರಾವ್​ ಅವರು ತಮಗೆ ಸೋಂಕು ಇಲ್ಲ ಎಂದು ಹೇಳಿದ್ದಾರೆ.

ಸಿಬ್ಬಂದಿಗೆ ಸಾಮೂಹಿಕವಾಗಿ ಕರೊನಾ ಪರೀಕ್ಷೆ ಮಾಡಿಸಲಾಗಿತ್ತು. ಆ ಪೈಕಿ ಭಾಸ್ಕರ್​ ರಾವ್​ರ ಕಾರು ಚಾಲಕನ ವರದಿ ಪಾಸಿಟಿವ್​ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net