More

    video/ ‘ರಮ್’ ಕುಡಿದ್ರೆ ಕರೊನಾ ಬರಲ್ಲ; ಕೌನ್ಸಿಲರ್ ರವಿಚಂದ್ರ ಗಟ್ಟಿ

    ಮಂಗಳೂರು: ಕೋವಿಡ್​ ಸೋಂಕಿಗೆ ಮದ್ದು ಕಂಡುಹಿಡಿಯಲು ಇಡೀ ಜಗತ್ತೇ ಹೋರಾಡುತ್ತಿದೆ, ವಿಜ್ಞಾನಿಗಳು ಅವಿರತ ಶ್ರಮಿಸುತ್ತಿದ್ದು, ನಿರಂತರ ಪ್ರಯೋಗ ನಡೆಯುತ್ತಲೇ ಇದೆ. ಹೀಗಿರುವಾಗ ಜನಪ್ರತಿನಿಧಿಯೊಬ್ಬರು ‘ಖೋಡೆಸ್ ರಮ್ ಕುಡಿದ್ರೆ ಕರೊನಾ ವೈರಸ್​ ಹತ್ತಿರ ಸುಳಿಯೋದಿಲ್ಲ’ ಎನ್ನುವ ಮೂಲಕ ಬಾರೀ ಟೀಕೆಗೆ ಗುರಿಯಾಗಿದ್ದಾರೆ.

    ಕರೊನಾ ಸೋಂಕು ಬರಬಾರದೆಂದರೆ ಖೋಡೆಸ್ ರಮ್​ ಕುಡಿಯಬೇಕು ಎಂದು ಬಿಟ್ಟಿ ಉಪದೇಶ ಕೊಟ್ಟವರು ಉಳ್ಳಾಲ ನಗರಸಭೆಯ ಕಾಂಗ್ರೆಸ್ ಕೌನ್ಸಿಲರ್ ರವಿಚಂದ್ರ ಗಟ್ಟಿ. ನಾನು ಮದ್ಯ ಸೇವಿಸುವುದಿಲ್ಲ ಎಂದಿರುವ ರವಿಚಂದ್ರ ಗಟ್ಟಿ, ಮದ್ಯ ತುಂಬಿದ ಬಾಟಲಿ ಹಿಡಿದು ಜನಸಾಮಾನ್ಯರಿಗೆ ಖೋಡೆಸ್ ರಮ್ ಕುಡಿಯಲು ಸಲಹೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

    ಇದನ್ನೂ ಓದಿರಿ video/ ಕಾಲು ಮುರಿದ ನೋವನ್ನೇ ಮರೆಸಿದ ‘ಕುರುಬನ ರಾಣಿ’, ಆಸ್ಪತ್ರೆಯಲ್ಲಿ ಮಲಗಿದ್ದರೂ ಡಾನ್ಸ್!

    ವಿಡಿಯೋದಲ್ಲಿ ಏನಿದೆ?: ‘ಬೆಂಗಳೂರು, ಮಡಿಕೇರಿ ಭಾಗಗಳಲ್ಲಿ ಅನೇಕರು ರಮ್ ಕುಡಿಯುತ್ತಾರೆ. ಆದರೆ ನಾನು ಕುಡಿಯುವುದಿಲ್ಲ. ಮೀನು ಕೂಡ ತಿನ್ನುವುದಿಲ್ಲ. ನೀವು ಮಾಡಬೇಕಾಗಿರುವುದಿಷ್ಟೆ. ಖೋಡೆಸ್ ರಮ್​ ತಗೊಳ್ಳಿ, ಅದಕ್ಕೆ ಒಂದು ಸ್ಪೂನ್ ಕಾಳುಮೆಣಸಿನ ಪುಡಿ ಸೇರಿಸಿ ಮಿಕ್ಸ್ ಮಾಡಿ ಕುಡಿಯಿರಿ. ಅದಕ್ಕೆ ನೆಂಚಿಕೊಳ್ಳಲು ಎರಡು ಹಾಫ್​ ಬಾಯಿಲ್ಡ್​ ಆಮ್ಲೆಟ್​ ತಿನ್ನಿ. ಇಷ್ಟು ಮಾಡಿದ್ರೆ ಸಾಕು ನೋಡಿ ಕರೊನಾ ನಿಮ್ಮ ಹತ್ತಿರವೂ ಬರುವುದಿಲ್ಲ. ನಾನು ಹಲವು ಔಷಧಗಳನ್ನು ಟ್ರೈ ಮಾಡಿದ್ದೇನೆ. ಪ್ರಯೋಜನಕ್ಕೆ ಬಂದಿಲ್ಲ. ಇದೊಂದೇ ಫಲಕೊಟ್ಟದ್ದು. ನಾನಿದನ್ನು ರಾಜಕಾರಣಿಯಾಗಿ ಶಿಫಾರಸು ಮಾಡುತ್ತಿಲ್ಲ. ಕರೊನಾ ಕಮಿಟಿಯ ಸದಸ್ಯನಾಗಿ ಹೇಳುತ್ತಾ ಇರುವುದು ಎಂದು ರವಿಚಂದ್ರ ಗಟ್ಟಿ ಹೇಳಿರುವ ವಿಡಿಯೋ ವೈರಲ್ ಆಗಿದೆ.

    ಇದನ್ನೂ ಓದಿರಿ ಡ್ರೋನ್​ ಪ್ರತಾಪ್​ ವಿರುದ್ಧ ಡಿಜಿಪಿ, ಪೊಲೀಸ್ ಕಮಿಷನರ್​ಗೆ ದೂರು

    ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಯೇ ಮದ್ಯದ ಬಾಟಲಿ ಹಿಡಿದು, ‘ಕರೊನಾ ತೊಲಗಿಸಲು ಮದ್ಯಪಾನ ಮಾಡಿ’ ಎನ್ನುತ್ತಿರುವುದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುವುದಲ್ಲದೆ, ಮದ್ಯಪಾನಕ್ಕೆ ಪ್ರೇರೇಪಿಸಿದಂತಿದೆ. ಇದು ಅಬಕಾರಿ ಕಾಯ್ದೆ ಪ್ರಕಾರ ಅಪರಾಧ. ಅವಿದ್ಯಾವಂತರು, ಮಕ್ಕಳು ಈ ವಿಡಿಯೋ ನೋಡಿ ಕರೊನಾಗೆ ಔಷಧವೆಂದು ಕುಡಿದರೂ ಅಚ್ಚರಿಯಿಲ್ಲ. ಜನರನ್ನು ತಪ್ಪು ದಾರಿಗೆ ದೂಡುವ ಉದ್ದೇಶ ಅಡಗಿದಂತಿದೆ ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

    ಗಟ್ಟಿಯವರ ಮಾತು ಕೇಳಿದವರಿಗೆ ಊರಬದಿಯ “ಸರ್ವರೋಗಕ್ಕೂ ಸಾರಾಯಿ ಮದ್ದು” ಎಂಬ ವಾಡಿಕೆಯ ಮಾತು ನೆನಪಾದರೆ ಅಚ್ಚರಿ ಇಲ್ಲ ಬಿಡಿ!

    ಕಾಂಗ್ರೆಸ್ ಕೌನ್ಸಿಲರ್​ ರವಿಚಂದ್ರ ಗಟ್ಟಿ ಹೇಳ್ತಾರೆ ನೋಡಿ ಕರೊನಾಕ್ಕೆ ಔಷಧ ಯಾವುದೂ ಅಂತ!

    ಒಂದು ಪೆಗ್​ ರಮ್​, ಅದಕ್ಕೊಂದು ಸ್ಪೂನ್ ಪೆಪ್ಪರ್, ಎರಡು ಆಮ್ಲೆಟ್​ ಸೇವಿಸಿದ್ರೆ ಕರೊನಾ ಮಂಗಮಾಯ ಅಂತಿದ್ದಾರೆ ನೋಡಿ ಕಾಂಗ್ರೆಸ್ ಕೌನ್ಸಿಲರ್​ ರವಿಚಂದ್ರ ಗಟ್ಟಿ

    Posted by Vijayavani on Friday, July 17, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts