

ವಾರೆ ವಾರೆ ಬಾರೆ ಬಾರೆ
ಬಿಂದಗೆಯ ಮೊರೆ ತೋರೆ
ಬಾರೆ ನನ್ನ ಕುರುಬನ ರಾಣಿs ಏಯ್s
ಕೋಟಿ ಕೋಟಿ ಚುಕ್ಕಿ ತಾರೆ
ಎಲ್ಲ ಸೇರಿ ಎರಕಹುಯ್ದಾ
ನನ್ನ ಬೊಂಬೆ ಕಿಲ ಕಿಲ ವಾಣಿs ಹಹ....
ಈ ಹಾಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಅದು ನಟ ಶಿವರಾಜ್ಕುಮಾರ್ಮತ್ತು ನಗ್ಮಾ ಅಭಿನಯದ ವಿಡಿಯೋ ಅಲ್ಲ, ಕಾಲು ಮುರಿದರೂ ನೋವಿನ ಪರಿವೇ ಇಲ್ಲದೆ ಆಸ್ಪತ್ರೆಯ ಆಪರೇಶನ್ ಥಿಯೇಟರ್ನಲ್ಲಿ ಬೆಡ್ ಮೇಲೆ ಮಲಗಿರುವ ರೋಗಿಯೊಬ್ಬ 'ಬಾರೆ ಬಾರೆ ಕುರುಬನ ರಾಣಿ' ಹಾಡಿಗೆ ಡಾನ್ಸ್ ಮಾಡುತ್ತಿರುವ ವಿಡಿಯೋ!
'ಬಾರೆ ಬಾರೆ ಕುರುಬನ ರಾಣಿ' ಸಾಂಗ್ ಅಂದ್ರೆ ಈ ವ್ಯಕ್ತಿಗೆ ಅದೆಷ್ಟು ಇಷ್ಟವೋ ಪದಗಳಲ್ಲಿ ಹೇಳಲು ಕಷ್ಟ. ಕಾಲು ಮುರಿದ ನೋವಿನ ಪರಿವೇ ಆಗದಷ್ಟು ಆಪ್ತತೆ ಇದೆ ಆ ವ್ಯಕ್ತಿಗೂ-ಈ ಹಾಡಿಗೂ. ರೋಗಿಯ ಕೋರಿಕೆ ಮೇರೆಗೆ ವೈದ್ಯರೇ ಕುರುಬನ ರಾಣಿ ಹಾಡು ಹಾಕಿಸಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎನ್ನಲಾಗಿದೆ.
ಬಾರೆ ಬಾರೆ ಕುರುಬನ ರಾಣಿ ಹಾಡು ಪ್ಲೇ ಆಗುತ್ತಿದ್ದಂತೆ ಫುಲ್ ಜೋಶ್ನಿಂದ ಮಲಗಿದ್ದಲ್ಲೇ ತಾಳಕ್ಕೆ ತಕ್ಕಂತೆ ಕೈಗಳ ಮೂಲಕ ಡಾನ್ಸ್ ಮಾಡುವ ಪರಿ ನೋಡುಗರನ್ನು ಹುಬ್ಬೇರಿಸುವಂತಿದೆ. ನಡುನಡುವೆ ಹಾಡಿಗೆ ತಕ್ಕಂತೆ 'ಹಹ, ಏಯ್, ಬಾರೆ ಬಾರೆ' ಎನ್ನುವ ಅವರ ಉತ್ಸಾಹ ನೋಡುತ್ತಿದ್ದರೆ ಆಶ್ಚರ್ಯದ ಜತೆಗೆ ಇದಪ್ಪಾ ಜೋಶ್ ಅಂದ್ರೆ ಅನ್ನಿಸುತ್ತದೆ.
ಇದು ಯಾವ ಆಸ್ಪತ್ರೆಯಲ್ಲಿ ನಡೆದ ಘಟನೆ, ರೋಗಿ ಯಾರು ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಆದರೆ ಆಪರೇಶನ್ ಕೊಠಡಿಯಲ್ಲಿ ಕನ್ನಡ ಮಾತನಾಡುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಆ ವಿಡಿಯೋಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.