More

    ಬೆಂಗಳೂರಿನಲ್ಲಿ ಇನ್ನೂ 15 ದಿನ ಲಾಕ್​ಡೌನ್​ ಸಾಧ್ಯತೆ

    ಬೆಂಗಳೂರು: ರಾಜ್ಯರಾಜಧಾನಿಯಲ್ಲಿ ಇನ್ನೂ ೧೫ ದಿನ ಲಾಕ್ಡೌನ್ ಮುಂದುವರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇದಕ್ಕೆ ಸಚಿವ ಗೋಪಾಲಯ್ಯ, ಬಿಬಿಎಂಪಿ ಆಯುಕ್ತ, ಮೇಯರ್ ಮುಂತಾದವರು ಈಗಾಗಲೇ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ.

    ಕೋವಿಡ್​-19 ಸೋಂಕಿನ ತೀವ್ರತೆಗೆ ಬ್ರೇಕ್​ ಹಾಕಲು ಬೆಂಗಳೂರಿನಲ್ಲಿ 14 ದಿನ ಲಾಕ್‍ಡೌನ್ ಅಗತ್ಯ ಎಂದು ಅಭಿಪ್ರಾಯಪಟ್ಟಿರುವ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಸದ್ಯ ಬೆಂಗಳೂರು ಮತ್ತು ಬೆಂ.ಗ್ರಾಮಾಂತರ ಜಿಲ್ಲೆಗಳಲ್ಲಿ ಜು.14 ರಾತ್ರಿ 8ರಿಂದಲೇ ಲಾಕ್​ಡೌನ್​ ಜಾರಿಯಲ್ಲಿದೆ. ಈ ಅವಧಿಯನ್ನು ಇನ್ನಷ್ಟು ದಿನ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿರಿ ಕರೊನಾಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತೀರಾ? ಹಾಗಿದ್ದಲ್ಲಿ ತಪ್ಪದೇ ಈ ರೂಲ್ಸ್ ಫಾಲೋ ಮಾಡಿ

    ಬೆಂಗಳೂರಿನಲ್ಲಿ ಕರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ಸೋಂಕಿನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದೆ. ಈ ಸೋಂಕಿನ ವೇಗಕ್ಕೆ ಬ್ರೇಕ್​ ಹಾಕಬೇಕೆಂದರೆ ಜನರು ಸುಮಾರು 14 ದಿನವಾದರೂ ಹೊರಗಿನ ಸಂಪರ್ಕಕ್ಕೆ ಬಾರದೆ ಮನೆಯಲ್ಲೇ ಸುರಕ್ಷಿತವಾಗಿ ಇರಬೇಕು. ಕರೊನಾ ಚೈನ್ ಲಿಂಕ್ ಕತ್ತರಿಸಲು ಲಾಕ್‍ಡೌನ್ ಅಗತ್ಯ. ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.

    ಕರೊನಾ ನಿಯಂತ್ರಿಸಲು, ಸೋಂಕಿತರಿಗೆ ಸಮರ್ಪಕವಾಗಿ ಚಿಕಿತ್ಸೆ ಕಲ್ಪಿಸಲು, ಕೋವಿಡ್​ ಸಂಕಷ್ಟದ ಪರಿಸ್ಥಿತಿ ನಿಭಾಯಿಸಲು ಸರ್ಕಾರಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳಲು ಲಾಕ್​ಡೌನ್​ ಅವಧಿಯೇ ಸೂಕ್ತ ಸಮಯ. ಬೆಂಗಳೂರಿನಲ್ಲಿ ಲಾಕ್​ಡೌನ್​ ಅವಧಿ ವಿಸ್ತರಣೆ ಕುರಿತು ಸದ್ಯದಲ್ಲಿಯೇ ಸಿಎಂ ಸಭೆ ನಡೆಸಲಿದ್ದು, ನಂತರ ತೀರ್ಮಾನ ಹೊರಬೀಳಲಿದೆ.

    ಕೋವಿಡ್ ಬೆಂಗಳೂರು ವಲಯ ಉಸ್ತುವಾರಿ ಸಚಿವರು ಮತ್ತು ಉಸ್ತುವಾರಿ ಅಧಿಕಾರಿಗಳ ಜತೆ ಶುಕ್ರವಾರ ಬೆಳಗ್ಗೆ ಸಭೆ ನಡೆಸಿದ ಸಿಎಂ, ವಾರಕಾಲದ ವಿವರ ಕೇಳಿ ಮಾಹಿತಿ ಪಡೆದರು. ಮುಂದಿನ ಕ್ರಮಗಳು ಬಗ್ಗೆ ಸಮಾಲೋಚನೆ ನಡೆಸಿದರು.

    video/ ಕಾಲು ಮುರಿದ ನೋವನ್ನೇ ಮರೆಸಿದ ‘ಕುರುಬನ ರಾಣಿ’, ಆಸ್ಪತ್ರೆಯಲ್ಲಿ ಮಲಗಿದ್ದರೂ ಡಾನ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts