ಎಚ್ಚರ! ಆಸ್ಪತ್ರೆಯಿಂದ ಕರೊನಾ ಸೋಂಕಿತ ಎಸ್ಕೇಪ್, ನಿಮ್ಮ ಬಳಿಯೂ ಆತ ಬರಬಹುದು...

corona
Published on

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರೊನಾ ಸೋಂಕಿತನೊಬ್ಬ ಸೆಕ್ಯೂರಿಟಿಗಳಿಗೆ ಉಗಿದು ಪರಾರಿಯಾಗಿದ್ದಾನೆ.

ಆಸ್ಪತ್ರೆಯಿಂದ ಓಡಿಹೋಗುತ್ತಿದ್ದ ಸೋಂಕಿತನನ್ನು ತಡೆಯಲು ಹೋದ ಸೆಕ್ಯೂರಿಟಿ ಮೇಲೆಯೇ ಆತ ಉಗಿದಿದ್ದಾನೆ. ಸ್ಥಳದಲ್ಲಿದ್ದ ಪೊಲೀಸ್​ ಸಿಬ್ಬಂದಿ ಮತ್ತು ಸೆಕ್ಯೂರಿಟಿಯನ್ನು ನೂಕಿ ಪರಾರಿಯಾಗಿದ್ದು, ಎಲ್ಲರಿಗೂ ದೊಡ್ಡ ತಲೆನೋವು ತಂದೊಡ್ಡಿದ್ದಾನೆ.  ಇದನ್ನೂ ಓದಿರಿ ಪಿಪಿಇ ಕಿಟ್​ ಧರಿಸದೆ ಕೋವಿಡ್​ ಸೋಂಕಿತನ ಅಂತ್ಯಸಂಸ್ಕಾರ ನೆರವೇರಿಸಿದ ಶಾಸಕ!

ಐಸೋಲೇಷನ್​ ವಾರ್ಡ್​ನಲ್ಲಿ ಟ್ರೀಟ್​ಮೆಂಟ್​ ಪಡೆಯುತ್ತಿದ್ದ ಕರೊನಾ ಸೋಂಕಿತ ಇಂದು ಏಕಾಏಕಿ ಎಸ್ಕೇಪ್​ ಆಗಿರುವುದು ಆರೋಗ್ಯಾಧಿಕಾರಿಗಳಿಗೆ ಟೆನ್ಷನ್​ ತಂದೊಡ್ಡಿದೆ. ಸೋಂಕಿತನು ವಾಣಿವಿಲಾಸ್​ ಆಸ್ಪತ್ರೆ ಮೂಲಕ ಹಾದುಹೋಗಿದ್ದು, ಇಲ್ಲೂ ಆತಂಕದ ಕಾರ್ಮೋಡ ಕವಿದಿದೆ.

ಆಸ್ಪತ್ರೆಯಿಂದ ಎಸ್ಕೇಪ್​ ಆದ ವ್ಯಕ್ತಿ ನಿನ್ನೆ ಸಂಜೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ. ಇಂದು ಕಾಂಪೌಡ್​ ಹಾರಿಕೊಂಡು ಹೋಗಿದ್ದಾನೆ. ಅಧಿಕಾರಿಗಳು ಈತನ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕರೊನಾ ಸೋಂಕಿತ ಎಸ್ಕೇಪ್​ ಆಗಿರುವುದು ನಿಜ ಎಂದು ವಿಕ್ಟೋರಿಯಾ ಆಸ್ಪತ್ರೆ ಡೀನ್ ಡಾ. ಜಯಂತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net