ದೇವೇಗೌಡರಿಗೆ ನಿನ್ನೆ ಕರೊನಾ ಪಾಸಿಟಿವ್​, ಇಂದು ನೆಗೆಟಿವ್!

devegowda
Published on

ಬೆಂಗಳೂರು: ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡರಿಗೆ ಇಂದಿನ ಕರೊನಾ ಟೆಸ್ಟ್ ವರದಿ ನೆಗೆಟಿವ್​ ಎಂದು ಬಂದಿದೆ.

ದೇವೇಗೌಡ ಮತ್ತು ಅವರ ಪತ್ನಿ ಚನ್ನಮ್ಮ ಇಬ್ಬರಿಗೂ ನಿನ್ನೆ ಕರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ದೇವೇಗೌಡ ದಂಪತಿಯನ್ನು ಮಣಿಪಾಲ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಕೂಡ ಕೋವಿಡ್ ಸೋಂಕು ಪರೀಕ್ಷೆ ಮಾಡಲಾಗಿದೆ. ಇಂದಿನ ವರದಿಯಲ್ಲಿ ದೇವೇಗೌಡರಿಗೆ ಕರೊನಾ ನೆಗೆಟಿವ್, ಚನ್ನಮ್ಮಗೆ ಪಾಸಿಟಿವ್​ ಎಂದು ಬಂದಿದೆ.

ಇದಕ್ಕೂ ಮುನ್ನ ಇಂದು ಬೆಳಗ್ಗೆಯೇ ದೇವೇಗೌಡ, ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಐಸೋಲೇಶನ್​ಗೆ ಒಳಗಾಗಿದ್ದೇವೆ. ಇತ್ತೀಚಿಗೆ ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಮುಂಜಾಗ್ರತಾ ಕ್ರಮವಾಗಿ ಕರೊನಾ ಟೆಸ್ಟ್​ ಮಾಡಿಸಿಕೊಳ್ಳಿ. ನನ್ನ ಆರೋಗ್ಯದ ಕುರಿತು ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಯಪಡುವ ಅಗತ್ಯವಿಲ್ಲ ಎಂದು ಟ್ವೀಟ್​ ಮೂಲಕ ತಿಳಿಸಿದ್ದರು. ಯಾರೂ ಆಸ್ಪತ್ರೆ ಬಳಿ ಬರಬೇಡಿ, ಆತಂಕ ಪಡೆಬೇಡಿ. ನುರಿತವೈದ್ಯರಿಂದ ನನ್ನ ತಂದೆ-ತಾಯಿಗೆ ಚಿಕಿತ್ಸೆ ಸಿಗುತ್ತಿದೆ ಎಂದು ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net