

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕು ಏರಿಕೆಯಾಗುತ್ತಿರುವ ನಡುವೆಯೇ ರಾಜ್ಯ ಸರ್ಕಾರ ಲಾಕ್ಡೌನ್ ನಿಯಮವನ್ನು ಸೋಮವಾರ ಭಾಗಶಃ ಸಡಿಲಿಸಿದೆ. ಮಾರ್ಚ್ 23ರಿಂದ ಬಹುತೇಕ ಗೃಹಬಂಧನದಲ್ಲಿರುವ ಜನರಿಗೆ ಇದು ಖುಷಿ ನೀಡಿದ್ದರೂ, ಎಚ್ಚರಿಕೆಯೂ ಅಗತ್ಯ. ಏಕೆಂದರೆ, ಲಾಕ್ಡೌನ್ ಸಡಿಲಿಕೆ ಖುಷಿಯಲ್ಲಿ ಜನರು ಅನವಶ್ಯಕವಾಗಿ ಬೇಕಾಬಿಟ್ಟಿ ಓಡಾಡಿದರೆ ಮತ್ತು ಮುನ್ನೆಚ್ಚರಿಕೆ ವಹಿಸದಿದ್ದರೆ ಕರೊನಾ ವ್ಯಾಪಕವಾಗಿ ಪಸರಿಸುವ ಸಾಧ್ಯತೆ ಇದ್ದು, ರಾಜ್ಯ ಮತ್ತೆ ದೀರ್ಘಕಾಲ ಲಾಕ್ಡೌನ್ ಎದುರಿಸಬೇಕಾಗಬಹುದು. ಹೀಗಾಗಿ ಜನರ ವರ್ತನೆ ಮೇಲೆ ಭವಿಷ್ಯ ನಿರ್ಧಾರವಾಗಲಿದೆ.
ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಚಿವ ಸಂಪುಟ ಸಹೋದ್ಯೋಗಿಗಳು ಮತ್ತು ಅಧಿಕಾರಿ ಗಳೊಂದಿಗೆ ಸಭೆ ನಡೆಸಿ, ನಿಯಮ ಸಡಿಲಿಕೆ ಕುರಿತು ತೀರ್ಮಾನ ಪ್ರಕಟಿಸಿದ್ದಾರೆ. ಕೆಎಸ್ಆರ್ಟಿಸಿ ಸೇರಿ ಎಲ್ಲ್ಲ ಸಾರಿಗೆ ನಿಗಮಗಳು ಮತ್ತು ಖಾಸಗಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಆಟೋ, ಟ್ಯಾಕ್ಸಿ, ಕ್ಯಾಬ್, ರಾಜ್ಯದೊಳಗಿನ ರೈಲು ಸಂಚಾರ, ಸಲೂನ್, ಎಲ್ಲ ರೀತಿಯ ಅಂಗಡಿ ಆರಂಭಕ್ಕೂ ಅವಕಾಶ ನೀಡಲಾಗಿದೆ.
‘ಜನರು ಇತಿಮಿತಿಯಲ್ಲಿ ಓಡಾಡಬೇಕು. ಈ ವೇಳೆ ಜನರು ಯಾವ ರೀತಿ ಸ್ಪಂದಿಸುತ್ತಾರೆ ನೋಡುತ್ತೇವೆ. ನಂತರ ಅಗತ್ಯ ಬಿದ್ದರೆ ರಿಯಾಯಿತಿ ಕಡಿತ ಮಾಡುತ್ತೇವೆ. ಮಾಸ್ಕ್ ಧರಿಸುವುದು ಕಡ್ಡಾಯ. ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಮಾತ್ರ ಸಾರ್ವಜನಿಕ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಉಳಿದ ಅವಧಿಯಲ್ಲಿ ಕರ್ಫ್ಯೂ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಅನಗತ್ಯವಾಗಿ ರಸ್ತೆಗಿಳಿದರೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಮುಖ್ಯಮಂತ್ರಿ ಬಿಎಸ್ವೈ ಹೇಳಿದರು.
ಸಾರಿಗೆ ಸೇವೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ನಿಯಮ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಆಟೋ, ಕ್ಯಾಬ್ಗಳಲ್ಲಿ ಓಡಾಡಿದ್ದು ಕಂಡುಬಂದರೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಮೇ 24 ಹಾಗೂ ಮೇ 31ರ ಭಾನುವಾರದಂದು ರಾಜ್ಯಾ ದ್ಯಂತ ಸಂಪೂರ್ಣ ಲಾಕ್ಡೌನ್ ಇರಲಿದೆ. ಆರೋಗ್ಯ ತುರ್ತು ಸೇವೆ ಹೊರತುಪಡಿಸಿ ಉಳಿದಂತೆ ಯಾವುದೇ ಚಟುವಟಿಕೆ ಇರುವುದಿಲ್ಲ. ಕಾರು, ಬಸ್, ಆಟೋ, ದ್ವಿಚಕ್ರವಾಹನ ಸೇರಿ ಎಲ್ಲಾ ಬಗೆಯ ಸಂಚಾರಕ್ಕೂ ನಿರ್ಬಂಧ ಇರಲಿದೆ. ಅಂಗಡಿಗಳು, ವಾಣಿಜ್ಯ ಚಟುವಟಿಕೆಗಳಿಗೂ ಅವಕಾಶವಿಲ್ಲ. ಹೋಟೆಲ್ಗಳಲ್ಲಿ ಪಾರ್ಸೆಲ್ ಮಾತ್ರ ಕೊಡಬಹುದು.
ಜವಾಬ್ದಾರಿ ಮರೆಯದಿರೋಣ...
ಯಾವುದಕ್ಕಿಲ್ಲ ಅವಕಾಶ
ಗೊಂದಲದ ತೀರ್ಮಾನ
ಬಸ್, ಆಟೋ, ಟ್ಯಾಕ್ಸಿ ಸಂಚಾರ, ಸಲೂನ್ ಸೇರಿ ಎಲ್ಲ ರೀತಿಯ ಅಂಗಡಿಗೆ ಅವಕಾಶ ನೀಡಿ ಜಿಮ್ ಹೋಟೆಲ್ಗಳ ಆರಂಭಕ್ಕೆ ಅವಕಾಶ ನೀಡದಿರುವ ಸರ್ಕಾರದ ತೀರ್ವನಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಜಿಮ್ ಮತ್ತು ಹೋಟೆಲ್ಗಳಲ್ಲಿ ದೈಹಿಕ ಅಂತರ ಕಾಯ್ದುಕೊಂಡು ಸೇವೆ ನೀಡಲು ಅವಕಾಶವಿದೆ. ಆದರೂ ಅವಕಾಶ ಕೊಟ್ಟಿಲ್ಲ ಎಂದು ಈ ಕ್ಷೇತ್ರದ ಕಾರ್ವಿುಕರು, ಗ್ರಾಹಕರು, ಮಾಲೀಕರು ಬೇಸರ ಹೊರಹಾಕಿದ್ದಾರೆ.