ರಾಜ್ಯದ 40 ಲಕ್ಷ ಜನರಿಗೆ ಮೇ 26ರಿಂದ ಉಚಿತ ಧಾನ್ಯ ವಿತರಣೆ

Grain 18 May 20
Published on

ಬೆಂಗಳೂರು: ರಾಜ್ಯದಲ್ಲಿ 40 ಲಕ್ಷ ವಲಸೆ ಕಾರ್ಮಿಕರು ಇರುವ ಅಂದಾಜಿದ್ದು, ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ್ ಯೋಜನೆಯಡಿ ಅವರಿಗೆಲ್ಲ ಜೂನ್ ಒಂದರಿಂದ ಉಚಿತ ಧಾನ್ಯ ಹಂಚಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೋಮವಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಪ್ಯಾಕೇಜ್‌ನ ಭಾಗವಾಗಿದೆ.

ಮೇ 26 ರಿಂದ 31ರವರೆಗೆ ವಲಸೆ ಕಾರ್ಮಿಕರಿಗೆ ತಲಾ 5 ಕೆಜಿ ಅಕ್ಕಿ ಅಥವಾ ಗೋಧಿ ವಿತರಿಸಲಾಗುವುದು. 2ನೇ ಹಂತದಲ್ಲಿ ಜೂನ್ 1 ರಿಂದ 10ರವರೆಗೆ ತಲಾ 5 ಕೆಜಿ ಅಕ್ಕಿ ಹಾಗೂ 2 ಕೆಜಿ ಕಡಲೆ ಕಾಳು ವಿತರಿಸಲಾಗುವುದು.

ವಲಸಿಗ ಕಾರ್ಮಿಕ ಸಮೀಪದ ನ್ಯಾಯಬೆಲೆ ಅಂಗಡಿಯಲ್ಲಿ ಆಧಾರ್ ನಂಬರ್ ನೀಡಿ ಈ ಪಡಿತರ ಪಡೆಯಬಹುದು.

ಎಪಿಎಲ್, ಬಿಪಿಎಲ್, ಸ್ವಂತ ಮನೆ, ಆದಾಯ ತೆರಿಗೆ ಕಟ್ಟುವ ವಲಸೆ ಕಾರ್ಮಿಕರಿಗೆ ಈ ಸೌಲಭ್ಯ ಸಿಗದು.

ರಾಜ್ಯದಲ್ಲಿ 4 ಕೋಟಿ ಪಡಿತರ ಚೀಟಿದಾರರಿದ್ದಾರೆ. ಇದರಲ್ಲಿ ಶೇ.10ರಷ್ಟು ವಲಸೆ ಕಾರ್ಮಿಕರು ಇದ್ದಾರೆಂದು ಕೇಂದ್ರ ಸರ್ಕಾರವೇ ಅಂದಾಜಿಸಿದೆ. ಈ ಪೈಕಿಯೂ ಕೆಲವರು ಈಗಾಗಲೇ ಸ್ವಸ್ಥಳಕ್ಕೆ ಮರಳಿದ್ದಾರೆ. ಉಳಿದ ಕಾರ್ಮಿಕರನ್ನು ರಾಜ್ಯ ಸರ್ಕಾರವೇ ಗುರುತಿಸಿ ಧಾನ್ಯ ವಿತರಿಸಲಿದೆ ಎಂದು ಗೋಪಾಲಯ್ಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net