More

    ದೇವೇಗೌಡರನ್ನು ಪಂಜಾಬಿನ ಜನ ಸ್ಮರಿಸುವುದು ಏಕೆ?

    ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಇಂದು (ಮೇ 18) ಜನ್ಮದಿನದ ಸಂಭ್ರಮ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವಾರು ಗಣ್ಯರು ಅವರಿಗೆ ಶುಭ ಹಾರೈಸಿ, ದೇಶಕ್ಕೆ ಅವರು ಕೊಟ್ಟ ಕೊಡುಗೆಯನ್ನು ಸ್ಮರಿಸಿದ್ದಾರೆ. ಆದರೆ, ಪಂಜಾಬಿನ ರೈತರು ದೇವೇಗೌಡರನ್ನು ನೆನೆಸಿಕೊಳ್ಳುವುದೇ ಬೇರೊಂದು ಕಾರಣಕ್ಕೆ.

    “ನಾನು ದೇವೇಗೌಡ ನಾಟಿ ಮಾಡಿದ್ದೇನೆ. ನನಗೇನೂ ಆತಂಕ ಇಲ್ಲ”; ” ನೀನು ಯಾವುದನ್ನು ನಾಟಿ ಮಾಡಿದ್ದೀಯಾ? ದೇವೇಗೌಡ ನಾಟಿ ಮಾಡಿದ್ದರೆ ನಿಶ್ಚಿಂತೆಯಾಗಿರುತ್ತಿದ್ದೆ…” ಹೀಗೆ ಪಂಜಾಬಿನ ರೈತರು ಮಾತನಾಡುತ್ತಾ ಇರುತ್ತಾರೆ.

    ಇದನ್ನೂ ಓದಿ ಇನ್ನಷ್ಟು ಹತ್ತಿರವಾಯ್ತು ಮೌಂಟ್​ ಎವರೆಸ್ಟ್​…!

    ಅಲ್ಲಿ ದೇವೇಗೌಡರು ಇಷ್ಟು ಪ್ರಸಿದ್ಧರಾಗಿರುವುದಕ್ಕೆ ಕಾರಣ ಇಷ್ಟೇ. ಅಲ್ಲಿನ ಭತ್ತದ ತಳಿಯೊಂದಕ್ಕೆ ದೇವೇಗೌಡ ಎಂದೇ ಹೆಸರಿಡಲಾಗಿದೆ!

    ಮೂಲತಃ ಪಂಜಾಬಿನವರಾದ, ಈಗ ಕರ್ನಾಟಕದವರೇ ಆಗಿಬಿಟ್ಟಿರುವ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಹೇಳುವ ಪ್ರಕಾರ, “ಇದು ಯಾವದೋ ಸಂಸ್ಥೆ ಮಾಡಿದ ಕೆಲಸವಲ್ಲ. ದೇವೇಗೌಡರು ರೈತ ಸಮುದಾಯಕ್ಕೆ ನೀಡಿರುವ ಕೊಡುಗೆ ಗಮನಿಸಿ ರೈತರೇ ಇಟ್ಟಿರುವ ಹೆಸರು. ಅದೂ ಸೂಪರ್ ಫೈನ್ ತಳಿಯೊಂದಕ್ಕೆ ಆ ಹೆಸರಿಟ್ಟಿದ್ದಾರೆ!”

    ಕೋವಿಡ್​ ಕಾಲದಲ್ಲಿ ರೈಲಿನಲ್ಲಿ ಸಂಚರಿಸುವುದೆಂದರೆ ವಿದೇಶ ಪ್ರಯಾಣಕ್ಕಿಂತೇನೂ ಕಡಿಮೆಯಿಲ್ಲ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts