More

    ಲಾಕ್​ಡೌನ್​ 4.0 ಮಾರ್ಗಸೂಚಿ ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕಾನೂನು ಕ್ರಮ

    ನವದೆಹಲಿ: ದೇಶದಲ್ಲಿ ಸೋಮವಾರ ( ಮೇ 18)ದಿಂದ ಲಾಕ್​ಡೌನ್​ 4.0 ಶುರುವಾಗಲಿದ್ದು ಮೇ 31ರವರೆಗೆ ಜಾರಿಯಲ್ಲಿ ಇರಲಿದೆ. ನಾಲ್ಕನೇ ಹಂತದ ಲಾಕ್​ಡೌನ್ ಮಾರ್ಗಸೂಚಿಯನ್ನು ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಬಿಡುಗಡೆ ಮಾಡಿದ್ದು, ಬಹುತೇಕ ಲಾಕ್​ಡೌನ್​ 3.0ದಲ್ಲಿನ ನಿಯಮಗಳೇ ಇವೆ.

    ಈ ಹಿಂದಿನಂತೆ ದೇಶಾದ್ಯಂತ ಸಂಜೆ 7ರಿಂದ ಮುಂಜಾನೆ 7ಗಂಟೆಯವರೆಗೆ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ. ವಾಹನಗಳಾಗಲಿ, ವ್ಯಕ್ತಿಗಳಾಗಲೀ ಸಂಚರಿಸುವಂತಿಲ್ಲ. ಅಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ಇರುತ್ತದೆ. ಆಯಾ ಜಿಲ್ಲೆಗಳು, ಪ್ರದೇಶಗಳಲ್ಲಿನ ಕೊವಿಡ್​ ಸ್ಥಿತಿಗತಿ ನೋಡಿಕೊಂಡು ಸ್ಥಳೀಯ ಆಡಳಿತಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬಹುದಾಗಿದೆ.
    65 ವರ್ಷ ಮೇಲ್ಪಟ್ಟು ಅಸ್ವಸ್ಥರಾಗಿರುವವರು, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು ಮನೆ ಬಿಟ್ಟು ಹೊರಬರುವಂತಿಲ್ಲ. ವೈದ್ಯಕೀಯ ಅಗತ್ಯತೆಗಳಿಗೆ ಮಾತ್ರ ಹೊರಬರಬಹುದು.

    ಇದನ್ನೂ ಓದಿ: ಲಾಕ್​ಡೌನ್​ 4.0: ಹೊಸ ಮಾರ್ಗಸೂಚಿ ಅನ್ವಯ ದೇಶದಲ್ಲಿ ಈ ಎಲ್ಲವೂ ಬಂದ್​…

    ಕಂಟೇನ್​ಮೆಂಟ್ ವಲಯಗಳನ್ನು ಹೊರತು ಪಡಿಸಿದ ಏರಿಯಾಗಳಲ್ಲಿ ಕೆಲವು ವಿನಾಯಿತಿ ನೀಡಲಾಗಿದೆ. ಅಂತರ ರಾಜ್ಯ ಬಸ್​, ವಾಹನ ಸಂಚಾರ ಮಾಡಬಹುದು. ಆದರೆ ಹೀಗೆ ಪ್ರಾರಂಭ ಮಾಡುವ ಮೊದಲು ಆಯಾ ರಾಜ್ಯಗಳು ಪರಸ್ಪರ ಒಪ್ಪಿರಬೇಕು.

    ಒಂದು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಒಳಗಡೆ ವಾಹನ, ಬಸ್​ಗಳ ಸಂಚಾರ ಆಯಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಕ್ಕೆ ಬಿಟ್ಟ ವಿಚಾರ. ಸ್ಥಳೀಯ ಆಡಳಿತಗಳೇ ನಿರ್ಧಾರ ಮಾಡಿಕೊಳ್ಳಬೇಕು. ಆದರೆ ಕರೊನಾ ಕಂಟೇನ್​ಮೆಂಟ್ ವಲಯಗಳಲ್ಲಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ಇಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    ಆಯಾ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿನ  ಕರೊನಾ ರೆಡ್​ಝೋನ್​, ಗ್ರೀನ್ ಝೋನ್​, ಆರೆಂಜ್​ ಝೋನ್​, ಕಂಟೇನ್​ಮೆಂಟ್ ವಲಯಗಳನ್ನು ಗುರುತಿಸಿಕೊಳ್ಳಬೇಕು. ಅಲ್ಲಿ ಈ ಹಿಂದಿನ ನಿಯಮಗಳೇ ಅನ್ವಯ ಆಗುತ್ತವೆ.  ಸ್ಥಳೀಯ ಆಡಳಿತಗಳೇ ನಿರ್ಧಾರ ಮಾಡಿಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿರುವ ಕೇಂದ್ರ ಗೃಹ ಸಚಿವಾಲಯ, ಆರೋಗ್ಯ ಸೇತು ಆ್ಯಪ್​ನ್ನು ಕಡ್ಡಾಯವಾಗಿ ಡೌನ್​ ಲೋಡ್​ ಮಾಡಿಕೊಳ್ಳಲು ಮಾರ್ಗಸೂಚಿಯಲ್ಲಿಯೂ ತಿಳಿಸಿದೆ.

    ಇದನ್ನೂ ಓದಿ:  ದೇಶದಲ್ಲಿ ಮೇ 31ರವರೆಗೂ ಲಾಕ್​ಡೌನ್​…

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ 2005ರ ಕಾಯ್ದೆ ಅನ್ವಯ ಲಾಕ್​ಡೌನ್​ 4.0 ಮಾರ್ಗಸೂಚಿ ರಚನೆಯಾಗಿದ್ದು, ಇದರಲ್ಲಿ ಹೇಳಲಾದ ಯಾವುದೇ ನಿಯಮವನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಇಲಾಖೆ ತಿಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts