More

    ಟಾಸ್‌ಗೂ ಅವಕಾಶ ಕೊಡದ ವರುಣ: ಕೆಕೆಆರ್‌ಗೆ ಟಾಪ್-2 ಖಚಿತ, ಹೊರಬಿದ್ದ ಹಾಲಿ ರನ್ನರ್ ಅಪ್

    ಅಹಮದಾಬಾದ್: ಕೋಲ್ಕತ ನೈಟ್‌ರೈಡರ್ಸ್‌ ಹಾಗೂ ಆತಿಥೇಯ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್-17ರ 63ನೇ ಪಂದ್ಯ ಭಾರಿ ಮಳೆಯಿಂದಾಗಿ ರದ್ದುಗೊಂಡಿದೆ ಮತ್ತು ಉಭಯ ತಂಡಗಳು ತಲಾ 1 ಅಂಕ ಹಂಚಿಕೊಂಡವು. ಇದರಿಂದಾಗಿ ಶುಭಮಾನ್ ಗಿಲ್ ಸಾರಥ್ಯದ ಗುಜರಾತ್ ತಂಡ ತನ್ನ ಅಂತಿಮ ಲೀಗ್ ಪಂದ್ಯಕ್ಕೂ ಮುನ್ನವೇ ಪ್ಲೇಆ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಜತೆಗೆ ಕೆಕೆಆರ್ ತಂಡ ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ತನ್ನ ಸ್ಥಾನವನ್ನು ಅಧಿಕೃತಗೊಳಿಸಿತು. ಈ ಮೂಲಕ ಮೊದಲ ಕ್ವಾಲಿೈಯರ್ ಪಂದ್ಯಕ್ಕೆ ಅರ್ಹತೆ ಸಂಪಾದಿಸಿತು.

    ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ಲೇಆಫ್ ಆಸೆ ಜೀವಂತವಿರಿಸಲು ಗುಜರಾತ್ ಪಾಲಿಗೆ ಮಹತ್ವದ್ದಾಗಿದ್ದ ಪಂದ್ಯದಲ್ಲಿ, ಎಡಬಿಡದೆ ಸುರಿದ ಮಳೆಯಿಂದಾಗಿ ಕನಿಷ್ಠ ಟಾಸ್ ಪ್ರಕ್ರಿಯೆಗೂ ಅವಕಾಶ ಸಿಗಲಿಲ್ಲ. ಭಾರಿ ಗಾಳಿ ಮಳೆ ಜತೆಗೆ ಮಿಂಚು-ಗುಡುಗಿನ ಆರ್ಭಟ ಪಂದ್ಯಕ್ಕೆ ಅಡ್ಡಿಪಡಿಸಿತು. ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಬಿಡುವು ನೀಡಿದ ಮಳೆ ಮತ್ತೆ ನಿರಂತರವಾಗಿ ಸುರಿಯಿತು. ಫಲಿತಾಂಶಕ್ಕಾಗಿ ಕನಿಷ್ಠ ತಲಾ 5 ಓವರ್‌ಗಳ ಪಂದ್ಯ ಆರಂಭಿಸಲು ರಾತ್ರಿ 10.56ರವರೆಗೆ ಸಮಯವಿತ್ತು. ಭಾರಿ ಮಳೆಯಿಂದಾಗಿ ಅಂಗಣದಲ್ಲಿ ನೀರು ಸಂಗ್ರಹವಾಗಿ ಮೈದಾನವನ್ನು ಪಂದ್ಯಕ್ಕೆ ಸಿದ್ದಪಡಿಸುವುದು ಅಸಾಧ್ಯವೆನಿಸಿತು. ಹೀಗಾಗಿ ರಾತ್ರಿ 10.15ರ ವೇಳೆಗೆ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್‌ಗಳು ನಿರ್ಧರಿಸಿದರು ಮತ್ತು ಉಭಯ ತಂಡಗಳ ನಾಯಕರಾದ ಶುಭಮಾನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಅನಿವಾರ‌್ಯವಾಗಿ ಪರಸ್ಪರ ಹಸ್ತಲಾಘವ ನೀಡಿ ಇದಕ್ಕೆ ಸಮ್ಮತಿಸಿದರು. ಹಿಂದಿನ 2 ಬಾರಿ ಪ್ಲೇಆಫ್​​ಗೇರಿ ಒಮ್ಮೆ ಚಾಂಪಿಯನ್, ರನ್ನರ್ ಅಪ್ ಆಗಿದ್ದ ಗುಜರಾತ್ ಟೈಟಾನ್ಸ್ ಮೊದಲ ಬಾರಿ ಲೀಗ್ ಹಂತದಲ್ಲಿಯೇ ಹೊರಬಿದ್ದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts