

ಬೆಂಗಳೂರು: ಕರೊನಾ ರಾತ್ರಿ ಬರುತ್ತೆ, ಹಗಲು ಬರಲ್ವಾ? ರಾತ್ರಿ ಕರ್ಫ್ಯೂ ಹಾಕಲು ಯಾವನು ಐಡಿಯಾ ಕೊಟ್ಟಿದ್ದು? ಅದರದ ಯಾವ ರೀತಿ ನಿಯಂತ್ರಣ ಆಗುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಸೋಮವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಲಸಿಕೆ ಪಡೆದವರಿಗೂ ಕರೊನಾ ಬರುತ್ತಿದೆ. ಸರ್ಕಾರ ಸರಿಯಾದ ರೀತಿಯಲ್ಲಿ ಪರಿಸ್ಥಿತಿ ನಿರ್ವಹಣೆ ಮಾಡಲಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿರಿ ಸಾರಿಗೆ ನೌಕರರ ಹೋರಾಟಕ್ಕೆ ಬೆಂಬಲ ಕೊಡ್ತೀನಿ, ಆದ್ರೆ ನಮ್ಮದೊಂದು ಷರತ್ತು ಇದೆ: ಎಚ್.ಡಿ.ರೇವಣ್ಣ
ಸಿಡಿ ಲೇಡಿ ಪ್ರಕರಣ ಕುರಿತು ಮಾತನಾಡಿದ ಡಿಕೆಶಿ, ಪಿಪಿಇ ಕಿಟ್ ಧರಿಸಿ ಮಲಗಿದವರ ಬಗ್ಗೆ ಗೊತ್ತಿದೆ. ತನಿಖೆ ಯಾವ ರೀತಿ ನಡೆಯುತ್ತಿದೆ ಎಂಬುದರ ಅರಿವಿದೆ. ಸಮಯ ಬಂದಾಗ ಮಾತನಾಡುತ್ತೇನೆ ಎಂದರು.