ಅತ್ಯಾಚಾರ ಆರೋಪಿಗೂ ಕೋವಿಡ್​ ಸೋಂಕು, ಪೊಲೀಸರಿಗೆ ಟೆನ್ಷನ್​!

corona
Published on

ಕಲಬುರಗಿ: ಹತ್ತು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗೆ ಕರೊನಾ ದೃಢಪಟ್ಟಿದ್ದು, ಈತನನ್ನು ಬಂಧಿಸಿದ್ದ ಪೊಲೀಸರಿಗೂ ಸೋಂಕು ಹರಡುವ ಭೀತಿ ಆವರಿಸಿದೆ.

ನಗರ ಹೊರವಲಯದ ಗ್ರಾಮದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಣ ಸಬಂಧ ಅಳಂದ ತಾಲೂಕಿನ ಧುತ್ತರಗಾಂವ ಗ್ರಾಮದ 21 ವರ್ಷದ ಯುವಕನನ್ನು ಜೂ.18ರಂದು ಮಹಿಳಾ‌ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದರು. ನಂತರ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿತ್ತು. ಆರೋಪಿಗೆ ಮಾಡಲಾದ ಕರೊನಾ ಪರೀಕ್ಷೆಯ ವರದಿ ಪಾಸಿಟಿವ್​ ಬಂದಿದ್ದು, ಪರಿಣಾಮ ಇನ್​ಸ್ಪೆಕ್ಟರ್ ಸೇರಿ 13 ಪೊಲೀಸರು ಕ್ವಾರಂಟೈನ್ ಆಗಿದ್ದಾರೆ. ಇದನ್ನೂ ಓದಿರಿ ಪಿಪಿಇ ಕಿಟ್​ ಧರಿಸದೆ ಕೋವಿಡ್​ ಸೋಂಕಿತನ ಅಂತ್ಯಸಂಸ್ಕಾರ ನೆರವೇರಿಸಿದ ಶಾಸಕ!

ಅತ್ಯಾಚಾರ ಆರೋಪಿಯನ್ನು ಬಂಧಿಸಿದ ಕೂಡಲೇ ಮುಂಜಾಗ್ರತಾ ಕ್ರಮವಾಗಿ ಆತನ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಸೋಮವಾರ ಬಂದ ವರದಿಯಲ್ಲಿ ಆರೋಪಿಗೆ(ಪಿ-9372) ಸೋಂಕು ಇರುವುದು ಗೊತ್ತಾಗಿದೆ. ಪೊಲೀಸ್​ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಸೀಲ್​ಡೌನ್ ಮಾಡುವ ಸಾಧ್ಯತೆ ಇದೆ.

ಕಾರಾಗೃಹದಲ್ಲಿ ಆರೋಪಿಯನ್ನು ಐಸೋಲೇಷನ್‍ನಲ್ಲಿ ಇಟ್ಟಿದ್ದರಿಂದ ಅಲ್ಲಿನ ಸಿಬ್ಬಂದಿಗೆ ಯಾವುದೇ ಆತಂಕವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಎನ್. ಸತೀಶ ಕುಮಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net