ಕರೊನಾ ಬುಲೆಟಿನ್​; ಇಂದು ಎಷ್ಟು ಜನರಿಗೆ ಸೋಂಕು? ಎಷ್ಟು ಸೋಂಕಿತರು ಗುಣಮುಖ?

corona virus2
Published on

ಬೆಂಗಳೂರು: ರಾಜ್ಯದಲ್ಲಿ ಭಾನುವಾರದಂದು ಕರೊನಾ ಸೋಂಕಿಗೆ ತುತ್ತಾದವರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿ ವರದಿಯಾಗಿದೆ. 1291 ಜನರಿಗೆ ಹೊಸದಾಗಿ ಸೋಂಕು ತಗುಲಿದ್ದರೆ 1530 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ 8,83,899ಕ್ಕೆ ಏರಿದೆ. ಇದರಲ್ಲಿ 8,47,612 ಸೋಂಕಿತರು ಗುಣಮುಖರಾಗಿದ್ದು, ಕೇವಲ 24,503 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ.

ಭಾನುವಾರ ಒಂದೇ ದಿನ ರಾಜ್ಯದ 15 ಜನರು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೆ ರಾಜ್ಯದಲ್ಲಿ ಸೋಂಕಿನಿಂದಾಗಿ ಮೃತರಾದವರ ಸಂಖ್ಯೆ 11765ಕ್ಕೆ ಹೆಚ್ಚಳವಾಗಿದೆ. ಪ್ರಸ್ತುತ 374 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮರಣ ಪ್ರಮಾಣ ಶೇ. 1.16ರಷ್ಟು ವರದಿಯಾಗಿದೆ. ಇದುವರೆಗೆ 1.1 ಕೋಟಿಗೂ ಅಧಿಕ ಮಂದಿಗೆ ಕರೊನಾ ಪರೀಕ್ಷೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net