ನಾಲ್ಕು ಜಿಲ್ಲೆಗಳಲ್ಲಿ ಕರೊನಾ ಅಟ್ಟಹಾಸ: ಅರ್ಧ ದಿನದಲ್ಲೇ 178 ಸೋಂಕಿತರು!

China Corona
Published on

ಬೆಂಗಳೂರು: ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ರಾಜ್ಯದಲ್ಲಿ 178 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

ಈ ಪೈಕಿ ಉಡುಪಿ, ಯಾದಗಿರಿ, ಕಲಬುರಗಿ ಮತ್ತು ರಾಯಚೂರಿನಲ್ಲಿ ಕರೊನಾ ಅಟ್ಟಹಾಸ ಮೆರೆದಿದೆ. ಮಹಾರಾಷ್ಟ್ರದಿಂದ ಬಂದವರು ಈ ನಾಲ್ಕೂ ಜಿಲ್ಲೆಗಳಲ್ಲಿ ವಿಪರೀತ ಸೋಂಕಿಗೆ ಒಳಗಾಗಿದ್ದಾರೆ.

ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2711ಕ್ಕೆ ಏರಿಕೆಯಾಗಿದೆ. 869 ಮಂದಿ ಆಸ್ಪತ್ರೆಗಳಿಂದ ಈಗಾಗಲೇ ಬಿಡುಗಡೆ ಹೊಂದಿದ್ದರೆ, ಸದ್ಯ, 1793 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 35 ಮಂದಿ ಬಿಡುಗಡೆ ಹೊಂದಿದ್ದಾರೆ. ನಿನ್ನೆ ಮತ್ತು ಇಂದು ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ ಎನ್ನುವುದೇ ನೆಮ್ಮದಿಯ ವಿಷಯ. ಇದಾಗಲೇ ಕರೊನಾ ರಾಜ್ಯದಲ್ಲಿ 47 ಮಂದಿಯನ್ನು ಬಲಿ ಪಡೆದಿದೆ.

ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ. ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ಪತ್ತೆಯಾಗಿರುವ ಹೊಸ ಪ್ರಕರಣಗಳ ವಿವರ ಇಂತಿದೆ:

ರಾಯಚೂರು: 62

ಯಾದಗಿರಿ: 60

ಉಡುಪಿ: 15

ಕಲಬುರಗಿ: 15

ಬೆಂಗಳೂರು: 9

ದಾವಣಗೆರೆ: 4

ಚಿಕ್ಕಬಳ್ಳಾಪುರ: 4

ಮಂಡ್ಯ: 2

ಧಾರವಾಡ: 1

ಮೈಸೂರು: 2

ಶಿವಮೊಗ್ಗ: 1

ಚಿತ್ರದುರ್ಗ: 1

ಬೆಂಗಳೂರು ಗ್ರಾಮಾಂತರ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net