More

    ಅಮ್ಮನಿಗೆ ಅಂದು ಮೋದಿ ಬರೆದ ಪತ್ರಗಳು ಇದೀಗ ಪುಸ್ತಕ ರೂಪದಲ್ಲಿ…

    ನವದೆಹಲಿ: ತಮ್ಮ ಅಮ್ಮನ ಬಗ್ಗೆ ಅಪಾರ ಮಮತೆ ಇಟ್ಟುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಯುವಕರಾಗಿದ್ದಾಗ ಪ್ರತಿ ರಾತ್ರಿಯೂ ದೇವತೆಗೆ ಪತ್ರ ಬರೆಯುತ್ತಿದ್ದರು. ‘ಜಗತ್​ ಜನನಿ’ ಎಂದು ಸಂಬೋಧಿಸುವ ಮೂಲಕ ಅವರು ತಮ್ಮ ಮನಸ್ಸಿಗೆ ಅಂದಿನ ದಿನ ಅನ್ನಿಸಿದ್ದನ್ನೆಲ್ಲಾ ಬರೆಯುವ ಹವ್ಯಾಸ ಇಟ್ಟುಕೊಂಡಿದ್ದರು.

    ಈ ಪತ್ರಗಳನ್ನೆಲ್ಲಾ ಕಲೆ ಹಾಕಿರುವ ಪ್ರಕಾಶನ ಸಂಸ್ಥೆ ಹಾರ್ಪರ್​ ಕಾಲಿನ್ಸ್​ ಇಂಡಿಯಾ ಅವರು ಇದನ್ನೀಗ ಪುಸ್ತಕ ರೂಪದಲ್ಲಿ ಹೊರತರಲು ತಯಾರಿ ನಡೆದಿದ್ದು, ಬಹುತೇಕ ಮುಕ್ತಾಯಗೊಂಡಿದೆ. 112 ಪುಟಗಳ ಈ ಪುಸ್ತಕವು ಜೂನ್​ನಲ್ಲಿ ಬಿಡುಗಡೆಗೊಳ್ಳಲಿದೆ.

    ಇದನ್ನೂ ಓದಿ: ಆನ್​ಲೈನ್​ ತರಗತಿ ಆವಾಂತರ: ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ!

    1986ಕ್ಕೂ ಹಿಂದಿನ ಪತ್ರಗಳನ್ನು ಕೂಡ ಮೋದಿಯವರ ಡೈರಿಯಿಂದ ತೆಗೆದುಕೊಳ್ಳಲಾಗಿದ್ದು, ಅದನ್ನು ಗುಜರಾತಿ ಭಾಷೆಯಿಂದ ಇಂಗ್ಲಿಷ್​ಗೆ ಖ್ಯಾತ ಚಲನಚಿತ್ರ ವಿಮರ್ಶಕ ಭಾವನಾ ಸೋಮಯ್ಯ ಅನುವಾದಿಸಿದ್ದಾರೆ. ಪುಸ್ತಕಕ್ಕೆ ಲೆಟರ್ಸ್ ಟು ಮದರ್’ ಎಂದು ಹೆಸರು ನೀಡಲಾಗಿದೆ. ಇದು ಇ- ಬುಕ್ ಮತ್ತು ಹಾರ್ಡ್​ ಕಾಪಿ ರೂಪದಲ್ಲಿ ಲಭ್ಯ ಇರಲಿದೆ ಎಂದಿದ್ದಾರೆ ಅವರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ, ಸುಮಾರು ನಲವತ್ತು ವರ್ಷಗಳಿಂದ ಚಲನಚಿತ್ರ ವಿಮರ್ಶಕ ಮತ್ತು ಹಲವಾರು ಪುಸ್ತಕಗಳ ಲೇಖಕರೂ ಆಗಿದ್ದಾರೆ ಭಾವನಾ ಸೋಮಯ್ಯ.

    ಇದು ಸಾಹಿತ್ಯಿಕ ಬರವಣಿಗೆಯ ಪ್ರಯತ್ನವಲ್ಲ; ಈ ಪುಸ್ತಕದಲ್ಲಿ ಕಾಣಿಸಿಕೊಂಡಿರುವ ಬರಹಗಳು ನನ್ನ ಅವಲೋಕನಗಳ ಪ್ರತಿಬಿಂಬಗಳು ಅಷ್ಟೇ. ಕೆಲವೊಮ್ಮೆ ಸರಿಯಾಗಿರದ ಆಲೋಚನೆಗಳನ್ನು ಕೂಡ ಅಕ್ಷರ ರೂಪಕ್ಕೆ ಇಳಿಸಿದ್ದೇನೆ. ನನಗೆ ಅನ್ನಿಸಿದ್ದನ್ನೆಲ್ಲವನ್ನೂ ಯಾವುದೇ ಫಿಲ್ಟರ್ ಇಲ್ಲದೇ ಇಲ್ಲಿ ವ್ಯಕ್ತಪಡಿಸಿದ್ದೇನೆ ಎಂದು ಮೋದಿ ಹೇಳಿರುವುದಾಗಿ ಹಾರ್ಪರ್ ಕಾಲಿನ್ಸ್ ಇಂಡಿಯಾ ತಿಳಿಸಿದೆ.

    ಇದನ್ನೂ ಓದಿ: ‘ಭವಿಷ್ಯದ ಅಮಿತಾಭ್​’ಗೆ ಬಿರುದುಗಳ ಮಹಾಪೂರ: ಆತ್ಮಕಥೆ ಬಿಚ್ಚಿಟ್ಟು ಕಣ್ಣೀರಾದ ನಟ ಸೋನು

    ‘ನಾನು ಲೇಖಕ ಅಲ್ಲ, ಅನೇಕ ಮಂದಿ ಕೂಡ ಲೇಖಕರು ಅಲ್ಲ. ಆದರೆ ಮನಸ್ಸಿಗೆ ತೋಚಿದ್ದನ್ನು ಎಲ್ಲರೂ ಯಾವುದಾದರೂ ಮೂಲಕ ಅಭಿವ್ಯಕ್ತಿ ಪಡಿಸಲು ಬಯಸುತ್ತಾರೆ. ಹೆಚ್ಚಿನ ಸಮಯದಲ್ಲಿ ಎಲ್ಲರ ನೆರವಿಗೆ ಬರುವುದು ಪೆನ್ ಮತ್ತು ಕಾಗದ. ನನಗೂ ಜಗತ್​ ಜನನಿಯ ಕುರಿತು ತಲೆಗೆ ಬಂದಿರುವ ಯೋಚನೆಗಳನ್ನು ಅಭಿವ್ಯಕ್ತಪಡಿಸಿಲು ಪೆನ್​, ಪೇಪರ್​ ಬಿಟ್ಟರೆ ಬೇರೆ ಆಯ್ಕೆಗಳಿರಲಿಲ್ಲ. ಆದ್ದರಿಂದ ಮನಸ್ಸು ಹಾಗೂ ತಲೆಯೊಳಗೆ ಏನು ನಡೆಯುತ್ತಿತ್ತೋ ಎಲ್ಲವನ್ನೂ ಬರೆದಿದ್ದೇನೆ. ಇದನ್ನು ನೋಡಿ ಅದು ಏಕೆ ಬರೆದಿದ್ದೆ ಎನ್ನುವುದನ್ನು ಇದೀಗ ಆತ್ಮಾ ವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

    ಹಿಂದೂ, ಋಷಿ-ಮುನಿಗಳು ಅಶ್ಲೀಲ ಪ್ರಿಯರು ಎಂದ ನಟಿ! ಇಸ್ಕಾನ್​ನಿಂದ ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts