ರಾಜ್ಯದಲ್ಲಿ ಹಾಲಿ ಕರೊನಾ ಸೋಂಕಿತರಿಗಿಂತ ಬಿಡುಗಡೆಯಾದವರೇ ಅಧಿಕ

Nation- corona
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ನಡುವೆಯೇ ಸಮಾಧಾನಕರ ಎನ್ನುವ ಸಂಗತಿಯೂ ಹೊರಬಿದ್ದಿದೆ.

ಅದೇನೆಂದರೆ ಇಲ್ಲಿಯವರೆಗೆ ಕಂಡುಬಂದಿರುವ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 9399. ಆದರೆ ಈ ಪೈಕಿ 5730 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದು, 3,523 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 249 ಹೊಸ ಪ್ರಕರಣಗಳು ಪತ್ತೆಯಾಗಿವೆ. ಐದು ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಕರ್ನಾಟಕದ ಕರೊನಾ ಸೋಂಕಿನಿಂದ ಮೃತಪಟ್ಟಿವರ ಸಂಖ್ಯೆ 142ಕ್ಕೆ ಏರಿದೆ.

ಈ ಪೈಕಿ ಬೆಂಗಳೂರು ಒಂದರಲ್ಲಿಯೇ 126 ಪ್ರಕರಣಗಳು ಪತ್ತೆಯಾಗಿವೆ. ಕಲಬುರಗಿಯಲ್ಲಿ 27, ವಿಜಪುರದಲ್ಲಿ 15, ಉಡುಪಿಯಲ್ಲಿ 14, ದಕ್ಷಿಣ ಕನ್ನಡದಲ್ಲಿ 12, ದಾವಣಗೆರೆಯಲ್ಲಿ 9, ಉತ್ತರ ಕನ್ನಡ ಮತ್ತು ಬಾಗಲಕೊಟೆಯಲ್ಲಿ 6, ಬೀದರ್​ ಮತ್ತು ಚಿಕ್ಕಮಗಳೂರಿನಲ್ಲಿ 5, ಧಾರವಾಡ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4, ರಾಮನಗರದಲ್ಲಿ 3, ಚಿತ್ರದುರ್ಗ, ಕೋಲಾರ, ತುಮಕೂರು, ಕೊಡಗುವಿನಲ್ಲಿ ತಲಾ 2, ಯಅದಗಿರಿ, ಮೂಸೂರು, ಚಿಕ್ಕಬಳ್ಳಾಪುರ, ಗದಗ ಮತ್ತು ಕೊಪ್ಪಳದಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.

ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗೆ ಮೃತಪಟ್ಟವರ ಪೈಕಿ ಮೂವರು ಬೆಂಗಳೂರುನಗರ ನಿವಾಸಿಗಳಾಗಿದ್ದಾರೆ. 70 ಹಾಗೂ 45 ವರ್ಷದ ಪುರುಷರು ಹಾಗೂ 38 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನುಳಿದಂತೆ ರಾಮನಗರದಲ್ಲಿ 90 ವರ್ಷದ ವೃದ್ಧ ಹಾಗೂ ಬಳ್ಳಾರಿಯಲ್ಲಿ 60 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net