ಶಾಪಗ್ರಸ್ತ ಕೋರಮಂಡಲ್​ ಎಕ್ಸ್​ಪ್ರೆಸ್​ ರೈಲು? ಕಳೆದ ನಾಲ್ಕು ದಶಕದಲ್ಲಿ 8 ಅಪಘಾತ

Odisha Train Tragedy
Published on

ನವದೆಹಲಿ: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ ಅಪಘಾತಕ್ಕೀಡಾದ ಕೋರಮಂಡಲ್​ ಎಕ್ಸ್​ಪ್ರೆಸ್​ ರೈಲು ಕಳೆದ ನಾಲ್ಕು ದಶಕಗಳಲ್ಲಿ 8 ಬಾರಿ ಅಪಘಾತಕ್ಕೀಡಾಗಿದೆ.

1977ರಲ್ಲಿ ತಮಿಳುನಾಡಿನ ಚೆನ್ನೈ ಸೆಂಟ್ರಲ್​ನಿಂದ ಪಶ್ಚಿಮ ಬಂಗಾಳದ ಹೌರಾ ನಡುವೆ ಸಂಚಾರ ಆರಂಭಿಸಿದ ಕೋಡಮಂಡಲ್​ ಎಕ್ಸ್​ಪ್ರೆಸ್​ ರೈಲು ಕಳೆದ 46 ವರ್ಷಗಳಲ್ಲಿ ಹಲವು ಬಾರಿ ಅಪಘಾತಕ್ಕೀಡಾಗಿದೆ.

ಮುಖಾಮುಖಿ ಡಿಕ್ಕಿ

1997ರ ಆಗಷ್ಟ್​ 15ರಂದು ಆಂಧ್ರಪ್ರದೇಶದ ವಿಶಾಖಪಟ್ಟಣ ಹಾಗೂ ಬ್ರಹ್ಮಪುರ ನಡುವೆ ಸಂಚರಿಸುವ ವೇಳೆ ರೈಲುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 75ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದರು.

1999ರ ಆಗಷ್ಟ್​ 15ರಂದು ದಕ್ಷಿಣ ಒಡಿಶಾ ಹಾಗೂ ಉತ್ತರ ಆಂಧ್ರಪ್ರದೇಶದ ಪ್ರಮುಖ ನದಿಯಾದ ನಾಗಾವಳಿ ನದಿ ದಾಟುವ ವೇಳೆ ಸಂಭವಿಸಿದ ಅಪಘಾತದಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದರು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

Train Accident

ಬೆಂಕಿಗೆ ಆಹುತಿ

2002ರ ಮಾರ್ಚ್​ 15ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೋವುರು ಮಂಡಲ ಮೇಲ್ಸೇತುವೆ ದಾಟುವ ಸಮಯದಲ್ಲಿ 7 ಬೋಗಿಗಳು ಹಳ್ಳಿ ತಪ್ಪಿದ ಪರಿಣಾಮ ಸುಮಾರು 100ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದರು.

2009ರ ಫೆಬ್ರವರಿ 13ರಂದು ಓಡಿಶಾದಿಂದ ನೂರು ಕಿಲೋಮೀಟರ್ ದೂರದಲ್ಲಿರುವ ಜಾಜ್​ಪುರ್​ ಕಿಯೋಂಜಾರ್​ ಪ್ರದೇಶದ ಬಳಿ ರೈಲು ಹಳಿ ತಪ್ಪಿ 16 ಪ್ರಯಾಣಿಕರು ಮೃತಪಟ್ಟಿದ್ದರು ಹಲವರು ಗಾಯಗೊಂಡಿದ್ದರು.

2009ರಲ್ಲಿ ಜಾಜ್​ಪುರ ಜಿಲ್ಲೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಕೆಲ ಬೋಗಿಗಳು ಬೆಂಕಿಗೆ ಆಹುತಿಯಾಗಿದ್ದವು.

Odisha Rail Tragedy

ಆನೆ-ಸಿಬ್ಬಂದಿ ಮೃತ್ಯು

2012ರ ಜನವರಿ 14ರಂದು ತಮಿಳುನಾಡಿನ ಲಿಂಗರಾಜ ರೈಲ್ವೆ ನಿಲ್ದಾಣದಲ್ಲಿ ಬಳಿ ರೈಲಿನ ಕೆಲ ಬೋಗಿಗಳು ಬೆಂಕಿಗೆ ಆಹುತಿಯಾಗಿದ್ದವು. ಅದೇ ವರ್ಷ ಡಿಸೇಂಬರ್​ 30ರಂದು ರೈಲಿಗೆ ಅಡ್ಡ ಬಂದ ಆನೆಗಳಿಗೆ ಗುದ್ದಿದ ಪರಿಣಾಮ ಎರಡು ಮರಿಯಾನೆ ಸೇರಿದಂತೆ ಆರು ಆನೆಗಳು ಹಾಗೂ ಓರ್ವ ಸಿಬ್ಬಂದಿ ಮೃತಪಟ್ಟಿದ್ದರು.

2015ರ ಏಪ್ರಿಲ್​ 18ರಂದು ತಮಿಳುನಾಡಿದ ನಿಡದವೋಲು ಜಂಕ್ಷನ್​ ಬಳಿ ಎರಡು ಬೋಗಿಗಳಲ್ಲಿ ಬೆಂಕಿಗೆ ಆಹುತಿಯಾಗಿದ್ದರಿಂದ ಅಪಾರ ನಷ್ಟ ಉಂಟಾಗಿತ್ತು.

1977ರಲ್ಲಿ ತಮಿಳುನಾಡಿನ ಚೆನ್ನೈ ಸೆಂಟ್ರಲ್​ನಿಂದ ಪಶ್ಚಿಮ ಬಂಗಾಳದ ಹೌರಾ ನಡುವೆ ಸಂಚಾರ ಆರಂಭಿಸಿದ ಕೋಡಮಂಡಲ್​ ಎಕ್ಸ್​ಪ್ರೆಸ್​ ರೈಲು ವಾರದಲ್ಲಿ ಎರಡು ದಿನ ಕಾರ್ಯಾಚರಣೆ ನಡೆಸುತ್ತಿತ್ತು. 1,662 ಕಿಲೋಮೀಟರ್ ಕ್ರಮಿಸಲು ಈ ರೈಲು ಒಟ್ಟು 33 ಘಂಟೆ 20 ನಿಮಿಷ ಸಮಯ ತೆಗೆದುಕೊಳ್ಳುತ್ತಿತ್ತು ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net