ಸಮಯ್ ರೈನಾ ಮನವಿ ತಿರಸ್ಕರಿಸಿದ ಸೈಬರ್ ಸೆಲ್ ಪೊಲೀಸರು; ಯೂಟ್ಯೂಬರ್​ ಕೇಳಿದ್ದೇನು ಗೊತ್ತಾ? | Samay Raina

Untitled design (28)
Published on

ಮುಂಬೈ: ಇಂಡಿಯಾ ಗಾಟ್​​ ಲ್ಯಾಟೆಂಟ್​ ಕಾರ್ಯಕ್ರಮದ ಮೂಲಕ ಸಮಯ್​ ರೈನಾ(Samay Raina) ಜನರನ್ನು ಸಾಕಷ್ಟು ರಂಜಿಸಿದ್ದಾರೆ. ಆದರೆ ಅದರ ಇತ್ತೀಚಿನ ಸಂಚಿಕೆಯಲ್ಲಿ ರಣವೀರ್​ ಅಲ್ಲಾಬಾಡಿಯಾ ಅವರ ಹೇಳಿಕೆಯು ವಿವಾದವನ್ನು ಹುಟ್ಟುಹಾಕಿದೆ. ರಣವೀರ್ ಅಲ್ಲಾಬಾಡಿಯಾ ಕ್ಷಮೆಯಾಚಿದರು ಜನರು ಅವರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಮಧ್ಯೆ ರಣವೀರ್​ ಮತ್ತು ಸಮಯ್​ ರೈನಾ ವಿರುದ್ಧ ಅನೇಕ ದೂರುಗಳು ದಾಖಲಾಗಿದೆ.

ದೂರು ಸ್ವೀಕರಿಸಿದ ನಂತರ ಮುಂಬೈ ಪೊಲೀಸರು ಪ್ರಕರಣದ ಮೇಲೆ ಕ್ರಮಕೈಗೊಂಡಿದ್ದಾರೆ. ಈಗ ಮಹಾರಾಷ್ಟ್ರ ಸೈಬರ್ ಸೆಲ್ ಯೂಟ್ಯೂಬರ್ ಸಮಯ್ ರೈನಾ ಅವರ ಮನವಿಯನ್ನು ತಿರಸ್ಕರಿಸಿದ್ದಾರೆ ಎಂಬ ಸುದ್ದಿ ಹೊರಬಂದಿದೆ. ವಾಸ್ತವವಾಗಿ ಸಮಯ್ ರೈನಾ ಅವರು ವಿಡಿಯೋ ಕಾನ್ಫೆರೆನ್ಸಿಂಗ್​ ಮೂಲಕ ತಮ್ಮ ಹೇಳಿಕೆಯನ್ನು ದಾಖಲಿಸಲು ಪೊಲೀಸರ ಬಳಿ ಅನುಮತಿ ಕೋರಿದ್ದರು. ಆದರೆ ಇಂಡಿಯಾಸ್ ಗಾಟ್ ಲ್ಯಾಟೆಂಟ್ ವಿವಾದದಲ್ಲಿ ಅವರ ಮೇಲ್ಮನವಿಯನ್ನು ಅಂಗೀಕರಿಸಲಾಗಿಲ್ಲ.

ಸ್ಟ್ಯಾಂಡ್-ಅಪ್ ಕಾಮಿಡಿಯನ್​ ಸಮಯ್ ರೈನಾ ಅವರಿಗೆ ಹೇಳಿಕೆ ದಾಖಲಿಸಲು ಈ ಮೊದಲು ಪೊಲೀಸರು ಮಾರ್ಚ್ 10ರವರೆಗೆ ಗಡುವು ನೀಡಿದ್ದರು. ಇದಾದ ನಂತರ ಸಮಯ್ ರೈನಾ ಪ್ರಸ್ತುತ ಅಮೆರಿಕದಲ್ಲಿದ್ದಾರೆ. ಪೊಲೀಸರಿಗೆ ಮಾಡಿದ ಮನವಿಯಲ್ಲಿ ಸಮಯ್​ ರೈನಾ ಅವರು ವೇಳಾಪಟ್ಟಿಯ ಕಾರಣದಿಂದಾಗಿ ಮಾರ್ಚ್ 17ರ ಮೊದಲು ಭಾರತಕ್ಕೆ ಮರಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಆದ್ದರಿಂದ ವಿಡಿಯೋ ಕಾನ್ಫರೆನ್ಸ್​ ಮೂಲಕ ಹೇಳಿಕೆ ದಾಖಲಿಸಲು ಅನುಮತಿ ನೀಡಿ ಎಂದು ಕೋರಿದ್ದಾರೆ.

ಆದರೆ ಮಹಾರಾಷ್ಟ್ರ ಸೈಬರ್ ಸೆಲ್ ಪೊಲೀಸರು ಅವರ ಮನವಿಯನ್ನು ತಿರಸ್ಕರಿಸಿದ್ದಾರೆ. ಮತ್ತು ಫೆಬ್ರವರಿ 18ರಂದು ಪೊಲೀಸ್​ ಠಾಣೆಗೆ ಬಂದು ಹೇಳಿಕೆ ದಾಖಲಿಸುವಂತೆ ಸೂಚಿಸಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ.(ಎಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net