'AK-47' ರೈಫಲ್‌ನಿಂದ ಗುಂಡು ಹಾರಿಸಿಕೊಂಡ ಪೊಲೀಸ್‌ ಅಧಿಕಾರಿ!

Untitled design - 2023-07-27T165001.350
Published on: 

ಒಡಿಶಾ: ಕೊರಾಪುಟ್ ಜಿಲ್ಲೆಯ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು 'ಎಕೆ-47' ರೈಫಲ್‌ನಿಂದ ಗುಂಡು ಹಾರಿಸಿಕೊಂಡು, ಗಂಭೀರ ಪರಿಸ್ಥಿತಿ ತಲುಪಿರುವ ಘಟನೆ ಒಡಿಶಾದಲ್ಲಿ ವರದಿಯಾಗಿದೆ.

ಗಂಭೀರವಾಗಿ ಗಾಯಗೊಂಡ ಪೊಲೀಸ್ ಅಧಿಕಾರಿಯನ್ನು 37 ವರ್ಷದ ಉಪ ಸುಬೇದಾರ್ ನರೇಂದ್ರ ಬಿಸ್ವಾಲ್ ಎಂದು ಗುರುತಿಸಲಾಗಿದ್ದು, ಜಿಲ್ಲಾ ಪೊಲೀಸ್ ನಕ್ಸಲ್ ನಿಗ್ರಹ ಘಟಕದಲ್ಲಿ ಸಬ್ ಇನ್ಸ್‌ಪೆಕ್ಟರ್ ಶ್ರೇಣಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಪ್ರಾರಂಭದಲ್ಲಿ ಎಸ್‌ಎಲ್‌ಎನ್ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಿಶಾಖಪಟ್ಟಣದ ಹಾಸ್ಪಿಟಲ್​ಗೆ ಸ್ಥಳಾಂತರಿಸಲಾಗಿದೆ.

"ಪ್ರಾಥಮಿಕ ತನಿಖೆಯು ಇದು ಆತ್ಮಹತ್ಯೆಯ ಪ್ರಯತ್ನ ಎಂದು ಹೇಳುತ್ತದೆ. ಆದ್ರೆ, ಇದಕ್ಕೆ ಬಲವಾದ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಡಿಐಜಿ (ನೈಋತ್ಯ ವ್ಯಾಪ್ತಿ) ಚರಣ್ ಸಿಂಗ್ ಮೀನಾ ಹೇಳಿದ್ದಾರೆ,(ಏಜೆನ್ಸೀಸ್).