VIDEO | ಒಳ್ಳೆಯ ಸ್ನೇಹಿತರು ನಕ್ಷತ್ರಗಳಂತೆ; 40 ವರ್ಷದ ಸ್ನೇಹವನ್ನು ಮೆಲುಕು ಹಾಕಿದ ನಟಿ ರೋಜಾ-ರಮ್ಯಾ ಕೃಷ್ಣ

Untitled design - 2023-07-27T160841.374
Published on

ಆಂಧ್ರಪ್ರದೇಶ: ಬಹುಭಾಷಾ ನಟಿಯರಾದ ರಮ್ಯಾ ಕೃಷ್ಣ ಮತ್ತು ರೋಜಾ ಅವರು ತಮ್ಮ 40 ವರ್ಷದ ಸ್ನೇಹವನ್ನು ಮೆಲುಕು ಹಾಕಿದ್ದು, ಈ ಕುರಿತು ಟ್ವಿಟರ್​​ನಲ್ಲಿ ಫೋಟೋ ಮತ್ತು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

20ರ ದಶಕದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ಅನೇಕ ಚಿತ್ರಗಳಲ್ಲಿ ಅಭಿನಯಿಸಿ, ಸಿನಿಪ್ರಿಯರನ್ನು ಮನರಂಜಿಸಿದ ನಟಿಯರಲ್ಲಿ ರಮ್ಯಾ ಕೃಷ್ಣ ಮತ್ತು ರೋಜಾ ಪ್ರಮುಖರು. ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ, ಸೈ ಎನ್ನಿಸಿಕೊಂಡ ಖ್ಯಾತ ನಟಿಯರು ಇದೀಗ ತಮ್ಮಿಬ್ಬರ 40 ವರ್ಷಗಳ ಸ್ನೇಹವನ್ನು ಪರಸ್ಪರ ಭೇಟಿಯಾಗುವ ಮೂಲಕ ಮೆಲುಕು ಹಾಕಿದ್ದಾರೆ. ಈ ಬಗ್ಗೆ ನಟಿ ರೋಜಾ ಸೆಲ್ವಾಮಣಿ ಟ್ವಿಟರ್​ನಲ್ಲಿ ಬರೆದು, ವಿಡಿಯೋ ಹಂಚಿಕೊಂಡಿದ್ದಾರೆ.

"ಒಳ್ಳೆಯ ಸ್ನೇಹಿತರು ನಕ್ಷತ್ರಗಳಂತೆ, ನೀವು ಯಾವಾಗಲೂ ಅವರನ್ನು ನೋಡುವುದಿಲ್ಲ. ಆದ್ರೆ, ನಿಮಗೆ ಗೊತ್ತು ಅವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾರೆ ಎಂದು. ಇಂದು ನನ್ನ ಕಾಣಲು ಬಂದ ನನ್ನ ನೆಚ್ಚಿನ ಸ್ಟಾರ್​ ಅನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದೆ. ಆ ದಿನಗಳಲ್ಲಿ ಜೀವನ ಹೇಗಿತ್ತು ಎಂಬುದು ನನಗೆ ನೆನಪಿಲ್ಲ. ನಾವು ಭೇಟಿಯಾದ ಕ್ಷಣಗಳು, ಆ ನಗು, ಎಷ್ಟು ಸಮಯ ಕಳೆದಿದ್ದೇವೆ. ನನ್ನ ಆತ್ಮೀಯ ಸ್ನೇಹಿತೆಯನ್ನು ಭೇಟಿಯಾಗಿದ್ದು, ನನಗೆ ಅತೀವ ಸಂತೋಷ ಉಂಟು ಮಾಡಿದೆ" ಎಂದು ಬರೆದು ರಮ್ಯ ಕೃಷ್ಣ ಅವರನ್ನು ಟ್ಯಾಗ್​ ಮಾಡಿ ಪೋಸ್ಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net