ಮೆಟ್ರೋ ರೈಲಿನೊಳಗೆ ಸಾಂಪ್ರಾದಾಯಿಕ ಉಡುಗೆಯಲ್ಲಿ ಯುವತಿಯ ಗರ್ಭಾ ನರ್ತನ; ಚರ್ಚೆಗೆ ಗ್ರಾಸವಾಯ್ತು ವೈರಲ್ ವಿಡಿಯೋ

Untitled design - 2023-07-27T152829.288
Published on

ನವದೆಹಲಿ: ಮೆಟ್ರೋ ರೈಲಿನೊಳಗೆ ಯುವತಿಯೊಬ್ಬಳು ಸಾಂಪ್ರಾದಾಯಿಕ ಉಡುಗೆ ತೊಟ್ಟು ಗರ್ಭಾ ಡ್ಯಾನ್ಸ್​ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಈ ಘಟನೆ ದೆಹಲಿಯಲ್ಲಿ ವರದಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಮೆಟ್ರೋ ರೈಲಿನಲ್ಲಿ ರೀಲ್ಸ್​ ಮಾಡುವ ಪ್ರವೃತ್ತಿ ಹೆಚ್ಚಿದ್ದು, ಈ ರೀತಿಯ ಘಟನೆಗಳು ಸಾಕಷ್ಟು ವರದಿಯಾಗಿದೆ. ಇದೀಗ ಈ ಸಾಲಿಗೆ ಮತ್ತೊಂದು ಘಟನೆ ಸೇರ್ಪಡೆಗೊಂಡಿದೆ. ಮೆಟ್ರೋ ರೈಲಿನೊಳಗೆ ಅನೇಕ ಪ್ರಯಾಣಿಕರ ಮಧ್ಯೆ ರಿಯಾ ಎಂಬ ಯುವತಿ ಗುಜರಾತಿ ಸಾಂಪ್ರದಾಯಿಕ ಉಡುಗೆ ಧರಿಸಿ, ಗಾರ್ಭಾ ನೃತ್ಯವನ್ನು ಮಾಡಿದ್ದಾರೆ. ಈ ವಿಡಿಯೋವನ್ನು ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದು, ದೃಶ್ಯ ನೋಡಿದ ನೆಟ್ಟಿಗರು ಯುವತಿಯ ನರ್ತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ವಿರೋಧಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾಡುವುದರಿಂದ ಹಲವರಿಗೆ ಮುಜುಗರ ಉಂಟಾಗುತ್ತದೆ. ಇದೆಲ್ಲವೂ ಶೀಘ್ರವೇ ಅಂತ್ಯವಾಗಬೇಕು ಎಂದು ಕಮೆಂಟ್ ಮುಖೇನ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net