More

    ಕಲಿಯುವಾಗಲೇ ಉದ್ಯೋಗ ಕೌಶಲ ಹೆಚ್ಚಸಿಕೊಳ್ಳಿ; ಕುಲಸಚಿವೆ ನಹಿದಾ ಜಮ್‌ಜಮ್ ಸಲಹೆ

    ತುಮಕೂರು: ಉದ್ಯೋಗದಲ್ಲಿ ಹಲವಾರು ರೀತಿಯ ಕೌಶಲಗಳ ಅವಶ್ಯಕತೆ ಇದೆ, ಶಿಕ್ಷಣದಲ್ಲಿ ಇ-ಕಲಿಕೆಯನ್ನು ಅಳವಡಿಸಿಕೊಂಡಾಗ ಕೌಶಲ ಪರಿಣಿತಿ ಹೊಂದಬಹುದು ಎಂದು ತುಮಕೂರು ವಿವಿ ಕುಲಸಚಿವೆ ನಾಹಿದಾ ಜಮ್‌ಜಮ್ ತಿಳಿಸಿದರು.

    ತುಮಕೂರು ವಿವಿ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಬೆಂಗಳೂರಿನ ಫಿನ್ವರ್ಸ್ ಅಪ್ಸ್ಕಿಲಿಂಗ್ ಪ್ರೈ ಲಿ., ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಉದ್ಯೋಗ ಕೌಶಲವರ್ಧನೆ ಮತ್ತು ಇ-ಲರ್ನಿಂಗ್ ಮೂಲಕ ಕೌಶಲ್ಯವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಉದ್ಯೋಗವಕಾಶ ಸೃಷ್ಟಿಸಬೇಕು, ಸ್ವ-ಉದ್ಯೋಗಗಳಿಗೆ ಈಗಿನ ಯುಗದಲ್ಲಿ ಹೆಚ್ಚಿನ ಬೆಲೆಯಿದೆ. ಕೌಶಲಾಭಿವೃದ್ಧಿ ಶಿಕ್ಷಣ ಈಗಿನ ಅಗತ್ಯವಾಗಿದೆ. ಓದುವ ಸಮಯದಲ್ಲೇ ಉದ್ಯೋಗಕ್ಕೆ ಬೇಕಿರುವ ಕೌಶಲಗಳನ್ನು ವೃದ್ಧಿಸಿಕೊಂಡರೆ ಒಳಿತು ಎಂದರು.

    ಬೆಂಗಳೂರಿನ ಫಿನ್ವರ್ಸ್ ಅಪ್ಸ್ಕಿಲಿಂಗ್ ಪ್ರೈ ಲಿಮಿಟೆಡ್‌ನ ನಿರ್ದೇಶಕ ಪವನ್ ಶರ್ಮಾ ಮಾತನಾಡಿ, ಸ್ನಾತಕೋತ್ತರ ಪದವಿಯಲ್ಲಿ ಶಿಕ್ಷಣದ ಜತೆಗೆ ಇ-ಕಲಿಕೆಯು ಬಹಳ ಮುಖ್ಯವಾಗಿದೆ. ಇ-ಕಲಿಕೆಯಲ್ಲಿ ಹಲವಾರು ರೀತಿಯ ಕೌಶಲಗಳನ್ನು ಕಲಿಯಬಹುದಾಗಿದೆ. ಜತೆಗೆ ತಂತ್ರಾಂಶಗಳ ಕಲಿಕೆಯೂ ಮುಖ್ಯ, ಈ ಎಲ್ಲಾ ಕೌಶಲಗಳಿಂದ ಉತ್ತಮ ಉದ್ಯೋಗ ಪಡೆಯಬಹುದಾಗಿದೆ ಎಂದರು.

    ಸ್ನಾತಕೋತ್ತರ ಮಾಹಿತಿ ವ್ಯವಸ್ಥೆ ಮತ್ತು ಸಂಶೋಧನ ವಿಭಾಗದ ಸಂಯೋಜಕ ಡಾ.ದೇವರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

    ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಪರಮಶಿವಯ್ಯ, ಪ್ರಾಧ್ಯಾಪಕ ಪ್ರೊ.ಜಿ.ಸುದರ್ಶನ ರೆಡ್ಡಿ, ಪ್ರೊ.ಬಿ.ಶೇಖರ್, ಸ್ನಾತಕೋತ್ತರ ವ್ಯವಹಾರ ಆಡಳಿತ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥೆ ಡಾ. ನೂರ್ ಅಫ್ಜಾ, ಸಿಇಒ ರಯಾನ್ ವಲಸಪಾಲಿ, ಅರ್ಪಣ ಭಟ್, ಅಶಿಮ್ ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts