

ಬೆಂಗಳೂರು: ಸ್ಯಾಂಡಲ್ವುಡ್ ನಟಿ ಸಂಯುಕ್ತಾ ಹೆಗ್ಡೆ ಹಾಟ್ ಹಾಗೂ ಬೋಲ್ಡ್ ಫೋಟೋಶೂಟ್ ಮೂಲಕವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಬಿಕಿನಿ ತೊಟ್ಟು ಕಡಲ ತೀರದಲ್ಲಿ ನಿಂತು ಪೋಸ್ ಕೊಟ್ಟಿರುವ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಕೆಡಿಸಿವೆ.
ಸ್ಯಾಂಡಲ್ವುಡ್ ಕಿರಿಕ್ ಸುಂದರಿ ನಟಿ ಸಂಯುಕ್ತಾ ಹೆಗ್ಡೆ ಸಮುದ್ರದ ತೀರದ ಹತ್ತಿರ ವೆಕೇಷನ್ ಎಂಜಾಯ್ ಮಾಡಲು ಹೋಗಿದ್ದಾರೆ. ಅಲ್ಲಿ ಬಿಕಿನಿ ಧರಸಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪ್ರಿಂಟೆಡ್ ಬಿಕಿನಿ ಹಾಕಿಕೊಂಡು ಸಖತ್ ಹಾಟ್ ಆಗಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಬೀಚ್ ಬಳಿ ಬಿಕಿನಿಯಲ್ಲಿ ಉಯ್ಯಾಲೆ ಆಡಿದ ಈ ಚೆಲುವೆ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.
ವಿಟಮಿನ್ ಸಿ ಕೊರತೆಯಾಗಿದೆ. ಆಗ ಬೀಚ್ ವೆಕೇಷನ್ ಬಂತು ಎಂದು ಕ್ಯಾಪ್ಶನ್ ಬರೆದಿದ್ದಾರೆ. ನಾನು ಬಳ್ಳಿಯಲ್ಲಿ ನೇಲುವುದನ್ನು ನೋಡಲು ಕೊನೆಯ ಫೋಟೋ ನೋಡಿ ಎಂದು ನಟಿ ಬರೆದಿದ್ದಾರೆ. ಇಷ್ಟೇ ಅಲ್ಲದೆ ಕಮೆಂಟ್ ಮಾಡಿ ಇದು ಕಳೆದ ವರ್ಷದ ನನ್ನ ಬರ್ತ್ಡೇ ಟ್ರಿಪ್. ಫನ್ ಟೈಮ್. ನಿಮ್ಮ ಫೇವರಿಟ್ ಬೀಚ್ ಲೊಕೇಷನ್ ಯಾವುದು ಎಂದು ಕೇಳಿದ್ದಾರೆ.
ಸಂಯುಕ್ತಾ ಹೆಗ್ಡೆ ಫೋಟೋಗಳಿಗೆ ಸೋಶಿಯಲ್ ಮಿಡಿಯಾದಲ್ಲಿ 43 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಸಂಯುಕ್ತಾ ಹೆಗ್ಡೆ ಪೋಟೋಗಳಿಗೆ ಕಾಮೆಂಟ್ ಬಾಕ್ಸ್ನಲ್ಲಿ ನೆಟ್ಟಿಗರು ಫಿಟ್ನೆಸ್ ಸೂಪರ್ ಆಗಿದೆಯೆಂದು ಹೊಗಳಿದ್ದಾರೆ.
ಹಾಟ್ , ಬೋಲ್ಡ್ ಸುಂದರಿ ಸಂಯುಕ್ತಾ ಹೆಗ್ಡೆ, ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಜನಪ್ರಿಯತೆ ಪಡೆದ ನಟಿ. ನಟಿ ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿದ್ದು ಆಗಾ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಾರೆ. ರೀಲ್ಸ್, ಶಾರ್ಟ್ಸ್ ವಿಡಿಯೋ ಅಪ್ಲೋಡ್ ಮಾಡುತ್ತಿರುತ್ತಾರೆ.