ಫ್ರಿಡ್ಜ್​ ಒಳಗೆ ಕುಕ್ಕರ್​; ಶುರುವಾಯ್ತು 'ಬಿಸಿಬಿಸಿ' ಚರ್ಚೆ!

Cooker
Published on

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಕುಕ್ಕರ್​-ಲಿಕ್ಕರ್ ಇತ್ಯಾದಿಗಳ ಬಿಸಿಬಿಸಿ ಚರ್ಚೆ ನಡೆಯವುದೇನೂ ಹೊಸ ವಿಷಯವೇನಲ್ಲ. ಆದರೆ ಇದೀಗ ಯಾವ ಚುನಾವಣೆಯೂ ಇರದ ಸಂದರ್ಭದಲ್ಲಿ ಒಂದು ಕುಕ್ಕರ್​ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಅಷ್ಟಕ್ಕೂ ಈ ಕುಕ್ಕರ್​ ಫ್ರಿಡ್ಜ್​ ಒಳಗೆ ಇದ್ದಿದ್ದೇ ಹೀಗೊಂದು ದೊಡ್ಡ ಚರ್ಚೆಗೀಡಾಗಲು ಕಾರಣ.

ಹೌದು.. ಫ್ರಿಡ್ಜ್​ವೊಂದರಲ್ಲಿ ಕಂಡುಬಂದ ಕುಕ್ಕರ್​ ಬಗ್ಗೆ ನೆಟ್ಟಿಗರು ಮಾತನಾಡುತ್ತಿದ್ದು, ಈ ಕುರಿತು ಟ್ವಿಟರ್​ನಲ್ಲಿ ಬಹಳ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಕ್ಷಿತ್ ಬವೇಜಾ ಎಂಬವರು 'ಉಳಿದಿರುವ ದಾಲ್ ಮತ್ತು ಅನ್ನವನ್ನು ಫ್ರಿಡ್ಜ್​ನಲ್ಲಿ ಇಡುವಂತೆ ನನ್ನ ಫ್ಲ್ಯಾಟ್​​ಮೇಟ್​ಗೆ ಹೇಳಿದೆ. ನನಗೆ ಎಚ್ಚರವಾಗುವಷ್ಟರಲ್ಲಿ ಹೀಗಾಗಿತ್ತು..' ಎಂದು ಫ್ರಿಡ್ಜ್​ ಒಳಗೇ ಕುಕ್ಕರ್​​ ಇಟ್ಟಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.

ಅವರ ಈ ಟ್ವೀಟ್​ಗೆ ಈಗಾಗಲೇ 7 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 700ಕ್ಕೂ ಅಧಿಕ ಮಂದಿ ಈ ಟ್ವಿಟ್​ ರಿ-ಟ್ವೀಟ್​/ಕೋಟ್​ ಟ್ವೀಟ್​ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, 500ಕ್ಕೂ ಅಧಿಕ ಮಂದಿ ಕಮೆಂಟ್ ಮಾಡಿದ್ದು, ಪರ-ವಿರೋಧ ಚರ್ಚೆಗಳೂ ನಡೆದಿವೆ. ಅದರಲ್ಲೂ ಇನ್ನೊಬ್ಬರು ಫ್ರಿಡ್ಜ್​ನೊಳಗೆ ಕುಕ್ಕರ್ ಇರುವ ಫೋಟೋ ಹಂಚಿಕೊಂಡು ಪೋಲ್ ಕ್ರಿಯೇಟ್ ಮಾಡಿ ಮತ ಆಹ್ವಾನಿಸಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ಮತ ಚಲಾಯಿಸಿದ್ದು, ಶೇ.50ಕ್ಕೂ ಅಧಿಕ ಮಂದಿ ಹೀಗೆ ಮಾಡಿದ್ದು ಸರಿ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೀಗೆ ಮಾಡುವುದರಿಂದ ಪಾತ್ರೆ ತೊಳೆಯುವ ಕೆಲಸವೂ ಉಳಿಯಿತು ಅಂತ ಕೆಲವರು, ಇನ್ನು ಕೆಲವರು ಮಾರನೇ ದಿನ ಮತ್ತೆ ಬಿಸಿ ಮಾಡಲು ಬೇರೆ ಪಾತ್ರೆ ಅರಸುವ ಹಾಗೂ ಬಳಸುವ ಕೆಲಸವೂ ಉಳಿಯಿತು ಎಂಬ ಉತ್ತರಗಳನ್ನು ನೀಡಿದ್ದಾರೆ. ಒಟ್ಟಿನಲ್ಲಿ ಫ್ರಿಡ್ಜ್​ನೊಳಗಿನ ಕುಕ್ಕರ್​ವೊಂದು ಜನರ ಆಸಕ್ತಿ ಕೆರಳಿಸಿದ್ದು, ಚರ್ಚೆಯಲ್ಲಿ ತೊಡಗಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net