

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಗುರುವಾರ ಭೇಟಿ ಮಾಡಿದ ಕ್ರೈಸ್ತ ಸಮುದಾಯದ ಮುಖಂಡರು, ಬಲವಂತವಾಗಿ ಮಾಡಲಾಗುವ ಮತಾಂತರ ಪ್ರಕ್ರಿಯೆಗೆ ನಮ್ಮದೂ ವಿರೋಧವಿದೆ ಎಂದಿದ್ದಾರೆ.
ಪ್ರಸ್ತಾವಿತ ಮತಾಂತರ ನಿಷೇಧ ಕಾಯ್ದೆಯನ್ನು ಯಾವುದೇ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡದೆ ಸಮಗ್ರ ಸಾಮಾಜಿಕ ಹಿತಾಸಕ್ತಿ ಹಾಗೂ ಎಲ್ಲ ಧರ್ಮೀಯರೂ ತಮ್ಮ ತಮ್ಮ ಧರ್ಮವನ್ನು ಶಾಂತಿ ಹಾಗೂ ಸಹಬಾಳ್ವೆಯಿಂದ ಆಚರಿಸಲು ಪೂರಕವಾಗಿರಲಿದೆ ಎಂದು ಕ್ರೈಸ್ತ ಸಮುದಾಯದ ಮುಖಂಡರು ಗೃಹ ಸಚಿವರಿಗೆ ಧನ್ಯವಾದ ಹೇಳಿದರು. ಬಲವಂತವಾಗಿ ಮಾಡಲಾಗುವ ಮತಾಂತರ ಪ್ರಕ್ರಿಯೆಗೆ ನಮ್ಮದೂ ವಿರೋಧವಿದೆ ಎಂದರು.