ಬೀದಿನಾಯಿ ಕಾಟ ನಿಯಂತ್ರಣಕ್ಕೆ ಸಹಕಾರ

rabies
ರೇಬಿಸ್ ಜಾಗೃತಿ ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಶಿರ್ವ ಪಿಡಿಒ ಪದ್ಮನಾಭ ನಾಯಕ್, ಪಶುವೈದ್ಯಾಧಿಕಾರಿ ಡಾ.ಅರುಣ್‌ಕುಮಾರ್ ಹೆಗ್ಡೆ, ಕಾಪು ಪಶುವೈದ್ಯಕೀಯ ಆಸ್ಪತ್ರೆಯ ಜಾನುವಾರು ಅಧಿಕಾರಿ ಗಿರೀಶ್, ಹಿರಿಯ ಪಶುವೈದ್ಯಕೀಯ ಪರಿವೀಕ್ಷಕ ಶಿವಪುತ್ರಯ್ಯ ಗುರುಸ್ವಾಮಿ ಇದ್ದರು
Published on

ಶಿರ್ವ: ಬೀದಿನಾಯಿಗಳ ಕಾಟ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಸಾಕುನಾಯಿಗಳೇ ಬೀದಿನಾಯಿಗಳಾಗಿ ರೇಬಿಸ್ ಹರಡುವಿಕೆಗೆ ಕಾರಣವಾಗುತ್ತವೆ. ಬೀದಿನಾಯಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಶಿರ್ವ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪದ್ಮನಾಭ ನಾಯಕ್ ಹೇಳಿದರು.

ಜಿಪಂ ಉಡುಪಿ, ತಾಪಂ ಕಾಪು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಶಿರ್ವ ಗ್ರಾಪಂ, ಪಶುಚಿಕಿತ್ಸಾಲಯ ಶಿರ್ವ ವತಿಯಿಂದ ನಾಗರಿಕ ಸಮಿತಿ ಬಂಟಕಲ್ಲು ನೇತೃತ್ವ ಹಾಗೂ ಲಯನ್ಸ್‌ಕ್ಲಬ್ ಬಂಟಕಲ್ಲು ಜಾಸ್ಮಿನ್, ರೋಟರಿ ಕ್ಲಬ್ ಶಿರ್ವ ಸಹಭಾಗಿತ್ವದಲ್ಲಿ ವಿಶ್ವ ರೇಬಿಸ್ ದಿನಾಚರಣೆ ಮತ್ತು ರೇಬಿಸ್ ಮಾಸಾಚರಣೆ ಪ್ರಯುಕ್ತ ಬುಧವಾರ ಬಂಟಕಲ್ಲು ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ ರೇಬಿಸ್ ಜಾಗೃತಿ, ಕರಪತ್ರ ಬಿಡುಗಡೆ ಹಾಗೂ ಶ್ವಾನಗಳಿಗೆ ಉಚಿತ ರೇಬಿಸ್ ಲಸಿಕಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪಶು ವೈದ್ಯಾಧಿಕಾರಿ ಡಾ.ಅರುಣ್‌ಕುಮಾರ್ ಹೆಗ್ಡೆ ರೇಬೀಸ್ ಮಾಹಿತಿ ನೀಡಿದರು. ಕಾಪು ಪಶುವೈದ್ಯಕೀಯ ಆಸ್ಪತ್ರೆಯ ಜಾನುವಾರು ಅಧಿಕಾರಿ ಗಿರೀಶ್, ಹಿರಿಯ ಪಶುವೈದ್ಯಕೀಯ ಪರಿವೀಕ್ಷಕರಾದ ಶಿವಪುತ್ರಯ್ಯ ಗುರುಸ್ವಾಮಿ, ವಸಂತ ಮಾದಾರ, ಪಶುವೈದ್ಯಕೀಯ ಪರಿವೀಕ್ಷಕ ಶರಣ ಪಾಟೀಲ ಉಪಸ್ಥಿತರಿದ್ದರು. ಬಂಟಕಲ್ಲು ನಾಗರಿಕ ಸಮಿತಿ ಅಧ್ಯಕ್ಷ ಕೆ.ಆರ್.ಪಾಟ್ಕರ್ ಅಧ್ಯಕ್ಷತೆ ವಹಿಸಿದ್ದರು ಶಿರ್ವ ರೋಟರಿ ಅಧ್ಯಕ್ಷ ಆಲ್ವಿನ್ ಅಮಿತ್ ಅರಾನ್ಹಾ, ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಅಧ್ಯಕ್ಷೆ ಅನಿತಾ ಮೆಂಡೋನ್ಸಾ, ನಾಗರಿಕ ಸಮಿತಿ ವಿನ್ಸೆಂಟ್ ಕಸ್ತಲಿನೊ ಪಲ್ಕೆ, ವಾಲೆಟ್ ಕಸ್ತಲಿನೊ, ರೋಟರಿ ಸದಸ್ಯ ರಿಚರ್ಡ್ ಪಾವ್ಲ್ ಫೆರಾವೊ, ಅಂಗನವಾಡಿ ಶಿಕ್ಷಕಿ ವಿನಯಾ ಕುಂದರ್, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net